December 23, 2024

ಎಸ್ಪಿ ವರ್ಗಾವಣೆಗೆ ಎಷ್ಟು ದರ ನಿಗದಿಯಾಗಿದೆ ಎಂದು ರಾಯರೆಡ್ಡಿ ಬಹಿರಂಗಪಡಿಸಲಿ;ನವೀನ್ ಗುಳಗಣ್ಣನವರ

 

 

ಕೊಪ್ಪಳ.

 

ನಿಕಟಪೂರ್ವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧ ವಂಟಗೋಡೆ ಯವರ ವರ್ಗಾವಣೆಯಲ್ಲಿ ಸರಕಾರ ಎಷ್ಟು ದರವನ್ನು ನಿಗದಿ ಮಾಡಿದೆ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಹಾಗೂ ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿಯವರು ಬಹಿರಂಗಪಡಸಲಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷರಾದ ನವೀನ್ ಕುಮಾರ್ ಗುಳಗಣ್ಣನವರ್ ಆಗ್ರಹಿಸಿದರು.

 

ಜನರನ್ನು ಗ್ಯಾರಂಟಿ ಗುಂಗಿನಲ್ಲಿ ಮುಳುಗಿಸಿರುವ ರಾಜ್ಯ ಸರಕಾರ, ಅಧಿಕಾರಿಗಳ ವರ್ಗಾವಣೆಯನ್ನು ದಂಧೆ ಮಾಡಿಕೊಂಡಿದೆ. ಒಂದ್ದೊಂದು ಹುದ್ದೆಗೆ ಒಂದು ದರ ನಿಗದಿ ಮಾಡಿದ್ದಾರೆ ಎಂದು ಬಿಜೆಪಿ ಈ ಮೊದಲೇ ಆರೋಪಿಸಿತ್ತು. ಈಗ ಸ್ವತಃ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರೇ ವರ್ಗಾವಣೆ ದಂಧೆ ಆಗಿದೆ ಎಂದು ಹೇಳಿ ನಮ್ಮ ಆರೋಪವನ್ನು ಒಪ್ಪಿಕೊಂಡಿದ್ದಾರೆ. ಕೊಪ್ಪಳ ಎಸ್ಪಿ ‌ಹುದ್ದೆಗೆ ರಾಜ್ಯ ಸರಕಾರ ಎಷ್ಟು ದರ ಫಿಕ್ಸ್ ಮಾಡಿದೆ ಎಂಬುದನ್ನೂ ರಾಯರೆಡ್ಡಿ ಅವರು ಬಹಿರಂಗಪಡಿಸಲಿ. ಬಹುಶಃ ‌ತಮಗೆ ಪಾಲು ಸಿಗದಿದ್ದರಿಂದ ರಾಯರೆಡ್ಡಿ ಅವರು ಈ ದಂಧೆಯನ್ನು ಬಹಿರಂಗ ಮಾಡಿರಬಹುದು ಎಂಬ ಅನುಮಾನ ಇದ್ದು, ಈ‌ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಆಗ್ರಹಿಸಿದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!