December 23, 2024

ರವಿಕುಮಾರ್ ಹಿರೇಮಠ ಅವರ ಹುಟ್ಟು ಹಬ್ಬ ರಕ್ತದಾನ ಶಿಬಿರ

ಕುಷ್ಟಗಿ.ಜು.07: ನಗರದ ಜಂಗಮ ಸಮಾಜದ ಹಿರಿಯ ಮುಖಂಡ ಹಾಗೂ ಜನನಾಯಕ ರವಿಕುಮಾರ್ ಹಿರೇಮಠ ಅವರ ಹುಟ್ಟು ಹಬ್ಬದ ಪ್ರಯುಕ್ತ ರವಿಕುಮಾರ್ ಹಿರೇಮಠ ಅವರ ಅಭಿಮಾನಿ ಬಳಗ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕೊಪ್ಪಳ ಇವರುಗಳ ಸಂಯುಕ್ತಾಶ್ರಯದಲ್ಲಿ ಶನಿವಾರ ಬೆಳಿಗ್ಗೆ ಇಲ್ಲಿನ ಮಹಾಂತ ಸಂಗಮ ಲೇಔಟ್ ನಲ್ಲಿ ರಕ್ತದಾನ ಶಿಬಿರ ನಡೆಯಿತು.
ಈ ಸಂದರ್ಭದಲ್ಲಿ ಶಾಸಕ ಹಾಗೂ ವಿಧಾನ ಸಭಾ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಎಚ್ ಪಾಟೀಲ್, ವಿರೇಶ ಕಲಕಬಂಡಿ, ಶಿವುಕುಮಾರ, ಪ್ರಭು ಶಂಕರಗೌಡ ಪಾಟೀಲ್, ಶಶಿಧರ ಕವಲಿ, ಕೆ.ಮಹೇಶ, ಮಲ್ಲಿಕಾರ್ಜುನ ಮಸೂತಿ, ಜಿ.ಕೆ ಹಿರೇಮಠ, ಬಾಲಾಜಿ ಬಳಿಗಾರ, ಐಸಿಟಿಸಿ ಕೌನ್ಸಿಲರ್ ಚನ್ನಬಸಪ್ಪ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಾರ್ವಜನಿಕ ಸಂಪರ್ಕ ಅಧಿಕಾರಿ ದೇವೇಂದ್ರಪ್ಪ ಹಿಟ್ನಾಳ ಹಾಗೂ ರವಿಕುಮಾರ್ ಹಿರೇಮಠ ಅವರ ಅಭಿಮಾನಿ ಬಳಗದವರು ಉಪಸ್ಥಿತರಿದ್ದರು.
ವರದಿಗಾರರು ಶರಣಪ್ಪ ಲೈನದ್ ಹೀರೆಮನ್ನಾಪುರ

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!