December 23, 2024

ಹದಗೆಟ್ಟ ರಸ್ತೆ;ಕೆಸರಿನಲ್ಲಿ ಸಿಲುಕಿದ ಬಸ್ ಪ್ರಯಾಣಿಕರ ಪರದಾಟ.

 

ಕೊಪ್ಪಳ:

 

ತಾಲೂಕಿನ ಅಳವಂಡಿ- ನಿಲೋಗಿಪುರ ಮಾರ್ಗದ ಹೈದರನಗರ ಗ್ರಾಮದಲ್ಲಿ ಬಸ್ ಕೆಸರಿನಲ್ಲಿ ಸಿಲುಕಿಕೊಂಡು ಹೊರಬಾರದೆ ಪರದಾಡಿದ ಘಟನೆ ನಡೆದಿದೆ.

 

ದಿನನಿತ್ಯ ಈ ಬಸ್‌ ನಿಲೋಗಿಪುರಕ್ಕೆ ಹೋಗಿ ಗ್ರಾಮೀಣ ಪ್ರದೇಶದ ಪ್ರಯಾಣಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಹೊತ್ತು ಅಳವಂಡಿಗೆ ತೆರಳತ್ತಿತ್ತು.ಕೆಸರಿನಲ್ಲಿ ಸಿಲುಕಿದ ಪರಿಣಾಮ ಶಾಲಾ ಕಾಲೇಜುಗಳಿಗೆ ತೆರಳಬೇಕಿದ್ದ ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಪರದಾಡುವಂತಾಗಿತು.

 

ಹೋಬಳಿ ವ್ಯಾಪ್ತಿಯಲ್ಲಿ ಬಹುತೇಕ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಇದರಿಂದ ಸವಾರರು ಪರದಾಡುವುದು ಸಾಮಾನ್ಯವಾಗಿದೆ. ಮಳೆ ಬಂದರೆ ಈ ರಸ್ತೆ ನೀರು ತುಂಬಿ ಕೆರೆಯಾಗಿ ನಿರ್ಮಾಣವಾಗಿ ನಂತರ ಕೆಸರು ಗದ್ದೆಯಾಗಿ ಮಾರ್ಪಡುತ್ತವೆ. ಈ ವೇಳೆ ವಾಹನ ಸವಾರರು ಜಾರಿ ಬೀಳುವುದು ಕಟ್ಟಿಟ್ಟ ಬುತ್ತಿಯಾಗಿದೆ .

 

ತಾಲೂಕಿನ ಬಹುತೇಕ ರಸ್ತೆಗಳು ಸಂಪೂರ್ಣ ಹಾಳಾಗಿದ್ದು,ತಗ್ಗು,ಗುಂಡಿ ಬಿದ್ದು ಸಂಚಾರಕ್ಕೆ ಯೋಗ್ಯವಲ್ಲದ ರಸ್ತೆಗಳಾಗಿ ಮಾರ್ಪಟ್ಟಿವೆ.ಒಂದು ಬದಿಯಿಂದ ವಾಹನಗಳು ಬಂದರೆ ಇನ್ನೋಂದು ಬದಿಯ ವಾಹನಗಳು ರಸ್ತೆ ಬದಿ ತಗ್ಗು ಪ್ರದೇಶಗಳಲ್ಲಿ ಉರುಳಿದ ಉದಾಹರಣೆಗಳು ಸಿಗುತ್ತವೆ.

 

ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಸಾಧಾರಣ ಮಳೆಗೆ ರಸ್ತೆಗಳು ದೊಡ್ಡ ಹೊಂಡಗಳಾಗಿ ಪರಿವರ್ತನೆಗೊಂಡು ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

 

ಜನರ ದಿನನಿತ್ಯದ ಗೊಳಾಟವನ್ನು ಕಂಡರು ಕೂಡ ಸಂಬಂಧಪಟ್ಟ ಅಧಿಕಾರಿಗಳು ಕಣ್ಮುಚ್ಚಿ ಕುಳಿತ್ತಿದ್ದು, ತಾಲೂಕಿನ ಜನತೆ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಇಡಿ ಶಾಪ ಹಾಕುತ್ತಿದ್ದಾರೆ.

 

 

 

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!