December 23, 2024

ಆರೋಗ್ಯರಕ್ಷಾ ಸಮಿತಿ ಪದಗ್ರಹಣ..!  ಸರ್ಕಾರಿ ಆಸ್ಪತ್ರೆ ಜನಸ್ನೇಹಿಯಾಗಲಿ: ಡಾ: ಈಶ್ವರ ಸವಡಿ

 

 

ಗಂಗಾವತಿ:

 

ಸರ್ಕಾರಿ ಆಸ್ಪತ್ರೆಗಳನ್ನು ಮತ್ತಷ್ಟು ಜನಸ್ನೇಹಿಯಾಗಿಸುವ ಮೂಲಕ ಬಡ ರೋಗಿಗಳಿಗೆ ಉತ್ತಮ ಸೌಲಭ್ಯಗಳು ಸಿಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಪ್ರತಿ ತಾಲೂಕು ಮತ್ತು ಜಿಲ್ಲಾಸ್ಪತ್ರೆಗೆ ಆರೋಗ್ಯ ರಕ್ಷಾ ಸಮಿತಿ ರಚಿಸಿ ಏಂಟು ಮಂದಿಯನ್ನು ನಾಮನಿರ್ದೇಶನ ಮಾಡಿದೆ ಎಂದು ಗಂಗಾವತಿ ಉಪವಿಭಾಗ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಈಶ್ವರ ಶಿ.ಸವಡಿ ತಿಳಿಸಿದರು.

ಗಂಗಾವತಿ ಉಪವಿಭಾಗ ಆಸ್ಪತ್ರೆ ಸಭಾಂಗಣದಲ್ಲಿ ನಡೆದ ಆರೋಗ್ಯ ರಕ್ಷಾ ಸಮಿತಿ ಪದ ಗ್ರಹಣದಲ್ಲಿ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿ, ಸರ್ಕಾರಿ ಆಸ್ಪತ್ರೆಗಳ ಸುಧಾರಣೆ ಹಾಗೂ ಜನಸ್ನೇಹಿ ಯಾಗಿಸುವ ಪ್ರಯತ್ನವನ್ನು ಸರ್ಕಾರ ನಡೆಸಿದೆ. ಸರ್ಕಾರದಿಂದ ಸಿಗುವ ಆರೋಗ್ಯ ಸೌಲಭ್ಯಗಳನ್ನು ಬಡ ಜನತೆಗೆ ತಲುಪಿಸುವಲ್ಲಿ ಯಾವುದೇ ಲೋಪವಾಗದಂತೆ ಕ್ರಮವಹಿಸಲು ಆರೋಗ್ಯ ರಕ್ಷಾ ಸಮಿತಿ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಸ್ವಚ್ಛತೆಗೆ ಆದ್ಯತೆ ನೀಡಿ:

ಆಸ್ಪತ್ರೆಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಬಡ ರೋಗಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ಹೆಚ್ಚಿನ ನಿಗಾ ವಹಿಸಬೇಕು. ಆಸ್ಪತ್ರೆಯಲ್ಲಿ ಮೂಲಸೌಲಭ್ಯ ಗಳ ಅಭಿವೃದ್ಧಿಗೆ ಅಗತ್ಯ ಕ್ರಮ ವಹಿಸಬೇಕು ಎಂದು ತಿಳಿಸಿದರು.

ಆರೋಗ್ಯ ರಕ್ಷ ಸಮಿತಿ ನಾಮ ನಿರ್ದೇಶಕರನ್ನಾಗಿ ರಾಜ್ಯ ಸರ್ಕಾರ ಗಂಗಾವತಿ ತಾಲೂಕು ಆಸ್ಪತ್ರೆ ಆರೋಗ್ಯ ರಕ್ಷಾ ಸಮಿತಿಗೆ

ಲಕ್ಷ್ಮಿ ಕೊತ್ವಾಲ್, ಹೊನ್ನೂರು ಅಲಿ, ಸಂತೋಷ್ ಪಾಟೀಲ್‌, ಚಂದ್ರಶೇಖರ ಕಲ್ಮನಿ, ಮಲ್ಲಿಕಾರ್ಜುನ ತಟ್ಟಿ, ಶರಣಪ್ಪ ಹಣವಾಳ, ಉಮಲೂಟಿ ಬಸಪ್ಪ ಹಾಗೂ ಪ್ರಭಾವತಿ ಜಂಗಮರ ಕಲ್ಗುಡಿ ಅವರನ್ನು ನಾಮ ನಿರ್ದೇಶನ ಗೊಳಿಸಿದ್ದಾರೆ.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಎಫ್.ರಾಘವೇಂದ್ರ, ಮನೋಹರಸ್ವಾಮಿ ಹಿರೇಮಠ, ಹುಲ್ಲಿಗೆಮ್ಮ ಕಿರಿಕಿರಿ,ಸುನಿತಾ ಶಾವಿ, ತಿಪ್ಪಣ್ಣ,ಮಾಜಿ ಜಿ.ಪಂ ಸದಸ್ಯ ಅಮರೇಶ ಗೋನ್ನಾಳ, ಗ್ಯಾರೆಂಟಿ ಯೋಜನಾ ತಾಲೂಕು ಅಧ್ಯಕ್ಷ ಎಸ್.ಬಿ‌,ಖಾದ್ರಿ,ಮಾಜಿ ಎಪಿಎಂಸಿ ಅಧ್ಯಕ್ಷ ನೀಲ್ಲಪ್ಪ ಸಣ್ಣಕ್ಕಿ, ಕಾಂಗ್ರೆಸ್ ಪಕ್ಷದ ಮುಖಂಡರಾದ ಹುಸೇನಪೀರ್ ಜವಳಗೇರಾ, ಕೆ.ಸನ್ನಿಕ ಭಾಷಾ,ವಿಶ್ವನಾಥ ಮಾಲಿ ಪಾಟೀಲ್, ಆಸೀಫ್ ಅಹ್ಮದ್, ಉಮರ್ ಹುಸೇನಸಾಬ, ಪರಶುರಾಮ ಕಿರಿಕಿರಿ, ವಿರೂಪಾಕ್ಷಸ್ವಾಮಿ ದಾಸನಾಳ, ಅಬ್ಬಾಸ್ ಚೌದರಿ,ಸಿರಾಜ್ ಅಹ್ಮದ್, ನೀಲಕಂಠ ಹೊಸಹಳ್ಳಿ, ಆನಂದ, ಸೇರಿದಂತೆ ಇತರರು ಇದ್ದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!