December 23, 2024

ಡಾ. ಬಸವರಾಜ ಕ್ಯಾವಟರ್ ರಿಂದ ವಿ ಸೋಮಣ್ಣ ಭೇಟಿ; ಕ್ಷೇತ್ರದ ಅಭಿವೃದ್ಧಿ ಕುರಿತು ಚರ್ಚೆ. 

 

ಕೊಪ್ಪಳ.

 

ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾದ ಶ್ರೀ ವಿ.ಸೋಮಣ್ಣ ಅವರನ್ನು ಭೇಟಿ ಮಾಡಿ ರೈಲ್ವೆ ಇಲಾಖೆಯಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಸಂಬಂದಿಸಿದ ಅಭಿವೃದ್ಧಿ ವಿಚಾರಗಳ ಬಗ್ಗೆ ಚರ್ಚೆ ಮಾಡಿ ಈ ಕೆಳಕಂಡ ಕೆಲವು ಸೇವೆಗಳನ್ನು ಪ್ರಾರಂಭಿಸಲು ಮನವಿ ಸಲ್ಲಿಸಿದರು

 

 

ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಪ್ರಗತಿ ಹಂತದಲ್ಲಿರುವ ಹಾಗೂ ಹೊಸ ಕಾಮಗಾರಿಗಳ ಕುರಿತು ಮತ್ತು ಕ್ಷೇತ್ರದ ಅಭಿವೃದ್ಧಿಯ ಕುರಿತು ಸುದೀರ್ಘವಾಗಿ ಕೇಂದ್ರ ಸಚಿವರೊಂದಿಗೆ ಸಮಾಲೋಚನೆ ನಡೆಸಿ ಈ ಕೆಳಗಿನ ಅಭಿವೃದ್ಧಿಯ ಪಟ್ಟಿಗಳನ್ನು ಸಲ್ಲಿಸಿದರು.

 

ತಳಕಲ್-ಕುಷ್ಟಗಿ ನಡುವಿನ ರೈಲು ಮಾರ್ಗ ಆರಂಭ.

ಗದಗ್-ವಾಡಿ ನಡುವಿನ ರೈಲು ಮಾರ್ಗದ ಕಾಮಗಾರಿ ಕುಷ್ಟಗಿ ವರೆಗೂ ಸಂಪೂರ್ಣವಾಗಿದ್ದು ಸುರಕ್ಷತೆಯ ರೈಲು ಸಂಚಾರವನ್ನು ಪರೀಕ್ಷಿಸಿ ಜನರ ಅನುಕೂಲಕ್ಕಾಗಿ ರೈಲ್ವೆ ಸಂಚಾರ ಆರಂಭಿಸಬೇಕು.

 

ಗಂಗಾವತಿ-ದರೋಜಿ ಹಾಗೂ ಗಂಗಾವತಿ-ಬಾಗಲಕೋಟ ನಡುವೆ ಹೊಸ ರೈಲು ಮಾರ್ಗವನ್ನೂ ಪ್ರಾರಂಭಿಸಬೇಕು.

 

ಜನರ ಸುರಕ್ಷತೆ ದೃಷ್ಟಿಯಿಂದ ಬನ್ನಿಕೊಪ್ಪ ಹಾಗೂ ಅಗಳಕೇರಾ ಗ್ರಾಮಗಳಲ್ಲಿ ಹಾದು ಹೋಗಿರುವ ರೈಲ್ವೆ ಟ್ರ್ಯಾಕ ಲೈನಗೆ ರೋಡ್ ಅಂಡರ್ ಬ್ರಿಜ್ ಹಾಗೂ ಮೇಲ್ ಸೇತುವೆ ನಿರ್ಮಿಸಬೇಕು

 

ಬೆಳಗಾವಿ-ಭದ್ರಾಚಲಂ ರೈಲ್ವೆಯನ್ನು ಪುನಃರಾರಂಭಿಸಬೇಕು

 

ಹೊಸ ವಂದೇ ಭಾರತ ರೈಲನ್ನು ಹುಬ್ಬಳ್ಳಿ-ಬೆಂಗಳೂರಿಗೆ ಗದಗ,ಕೊಪ್ಪಳ,ಹೊಸಪೇಟೆ,

ಬಳ್ಳಾರಿ ಮಾರ್ಗದಲ್ಲಿ ಪ್ರಾರಂಭಿಸಲು ಮನವಿ ಸಲ್ಲಿಸಿದರು ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!