December 23, 2024

ಪಾಪದ ಫಲವೇ ದುಃಖ ಪುಣ್ಯದ ಫಲವೇ ಪುಣ್ಯ; ಫಕೀರಸಾಬ ನೂರಭಾಷ

 

ಯಲಬುರ್ಗಾ :

ಪಾಪದ ಫಲವೇ ದುಃಖ ಪುಣ್ಯದ ಫಲವೇ ಸುಖ ನಾವು ಇನ್ನೊಬ್ಬರಿಗೆ ಒಳಿತನ್ನು ಮಾಡಬೇಕು, ಅದು ನಮಗೆ ಆಗದಿದ್ದರೆ ಇನ್ನೊಬ್ಬರಿಗೆ ಕೆಡಕನ್ನು ಬಯಸಬಾರದು ಸದಾ ಪುಣ್ಯದ ಕಾಯಕದಲ್ಲಿ ಭಾಗವಹಿಸಬೇಕು ಎಂದು ಜ್ಞಾನಸಾಗರ ಇಂಗ್ಲಿಷ್ ಕರಿಯರ್ ಅಕಾಡೆಮಿಯ ಕೊಪ್ಪಳದ ಸಂಸ್ಥಾಪಕ ಫಕೀರಸಾಬ ನೂರಭಾಷ ಹೇಳಿದರು.

 

ತಾಲೂಕಿನ ದಮ್ಮೂರ ಗ್ರಾಮದ ಶ್ರೀ ಭೀಮಾಂಬಿಕಾ ದೇವಿ ದೇವಸ್ಥಾನದಲ್ಲಿ ಚತುರ್ದಶಿ ಅಂಗವಾಗಿ ಹಮ್ಮಿಕೊಂಡಿರುವ ೩೬೩ ನೇ ಶಿವಾನುಭವಗೋಷ್ಠಿಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಶ್ರೀ ಭೀಮಾಂಬಿಕಾ ದೇವಿಯ ಪವಾಡಗಳನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕು, ಶಾಂತಿ, ನೆಮ್ಮದಿಯ ಜೀವನಕ್ಕೆ ಆಧ್ಯಾತ್ಮಿಕ ಚಿಂತನೆ ದಾರಿದೀಪವಾಗಿದೆ, ಪುರಾಣ , ಶಿವಾನುಭವ ಚಿಂತನಗೋಷ್ಠಿಯಲ್ಲಿ ಭಾಗವಹಿಸಿದಾಗ ನೆಮ್ಮದಿ ಕಾಣಲು ಸಾದ್ಯ ಎಂದು ಅಪರ ಸರ್ಕಾರಿ ವಕೀಲ ಮಲ್ಲನಗೌಡ ಎಸ್. ಪಾಟೀಲ ಅವರುಹೇಳಿದರು.

 

ಧರ್ಮರಮಠದ ಹನುಮಂತಜ್ಞ ಹಾಗೂ ಶರಣಯ್ಯ ಹಿರೇಮಠ ಸಾನಿಧ್ಯ ವಹಿಸಿದ್ದರು. ಶ್ರೀ ಭೀಮಾಂಬಿಕಾ ದೇವಿ ಶಿವಾನುಭವ ಸೇವಾ ಸಮಿತಿ ಅಧ್ಯಕ್ಷ ಶರಣಬಸಪ್ಪ, ದಾನಕೈ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ವೇಳೆ ಸ್ಟೇಲೋ ಟೇಲ‌ರ್ ಶೇಖಸಾಬ ನೂರಭಾಷ, ರಾಜಪ್ಪ ಹಗೇದಾಳ, ಈರಣ್ಣ ಕಟಗೇರಿ, ಮೌನೇಶ ಬಡಿಗೇರ, ಯಮನೂರಪ್ಪ ಹಳ್ಳಿಕೇರಿ, ನೀಲಕಂಠಪ್ಪ ರೊಡ್ಡ‌ರ್, ಈರಪ್ಪ ರಾವಣಕಿ, ಕಳಕಪ್ಪ ಹಡಪದ, ಬಾಳಪ್ಪ ಜರಕುಂಟಿ, ಇತರರು ಇದ್ದರು.

Message

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!