December 23, 2024

ಮುಡಾ ಹಗರಣದ ಹೊಣೆ ಹೊತ್ತು ಸಿ.ಎಂ. ರಾಜೀನಾಮೆ ನೀಡಲಿ ; ನವೀನ್ ಗುಳಗಣ್ಣನವರ್

 

 

ಕೊಪ್ಪಳ.

 

ಸಿಎಂ ಸಿದ್ದರಾಮಯ್ಯನವರ ತವರು ಜಿಲ್ಲೆಯಲ್ಲಿ ನಡೆದ ಮುಡಾ ಹಗರಣದಲ್ಲಿ ಸ್ವತಹ ಸಿಎಂ ಪತ್ನಿಯವರ ಹೆಸರು ಕೇಳಿ ಬರುತ್ತಿರುವ ಹಿನ್ನೆಲೆ ಹಗರಣದ ಹೊಣೆಯನ್ನು ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕೊಪ್ಪಳ ಜಿಲ್ಲಾ ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷ ನವೀನ ಕುಮಾರ್ ಗುಳಗಣ್ಣನವರ ಹೇಳಿದರು.

 

 

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಕೂಡ ಭ್ರಷ್ಟಾಚಾರ, ವರ್ಗಾವಣೆ ದಂದೆ, ಹಾಗೂ ಹಗರಣಗಳಲ್ಲಿ ಮುಳಗಿ ಹೋಗಿದ್ದು ಭ್ರಷ್ಟಾಚಾರ ರಹಿತ ಆಡಳಿತ ನೀಡುವುದಾಗಿ ಹೇಳಿ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯನವರ ಸರ್ಕಾರವು ಹಗರಣಗಳ ಮಾಲೆಯನ್ನು ರಾಜ್ಯದ ಜನರ ಕೊರಳಿಗೆ ಹಾಕಿದೆ.

ಸಿಎಂ ತವರು ಕ್ಷೇತ್ರ ಮೈಸೂರಿನ ಮುಡಾ ಸೈಟು ಹಂಚಿಕೆಯಲ್ಲಿ ನೂರಾರು ಕೋಟಿ ರೂಪಾಯಿಗಳ ಹಗರಣ ನಡೆದಿದ್ದು ಈ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಹಾಗೂ ಅಳಿಯ ನೇರವಾಗಿ ಶಾಮಿಲು ಆಗಿದ್ದು ಅವರ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ಹಗರಣ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದರ ನೇರ ಹೊಣೆ ಒತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕೆಂದು ಹೊತ್ತಾಹಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಡಾ. ಬಸವರಾಜ ಕ್ಯಾವಟರ್, ಮಾಜಿ ಶಾಸಕರಾದ ಬಸವರಾಜ್ ದಡಸಗೂರು, ರಾಜ್ಯ ಮಾಧ್ಯಮ ಪ್ರಮುಖರಾದ ಪ್ರಮೋದ್ ಕಾರ್ಕೋಣ ಜೀ,ಜಿಲ್ಲಾ ವಕ್ತಾರರಾದ ಸೋಮಶೇಖರ್ ಗೌಡ್ರು, ಅಮಿತ್ ಕಂಪ್ಲಿಕರ್, ಪ್ರಸಾದ್ ಗಾಳಿ,ಗಣೇಶ್ ಹೊರಟ್ನಾಳ್ ಇನ್ನೂ ಮಂತಾದವರು ಉಪಸ್ಥಿತರಿದ್ದ

ರು

 

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!