December 23, 2024

ಹದಗೆಟ್ಟ ಕೆಳ ಸೇತುವೆ ರಸ್ತೆ; ಪ್ರಯಾಣಿಕರ ಪರದಾಟ

 

ಕೊಪ್ಪಳ

 

ನಗರದ ಕಿನ್ನಾಳ ರಸ್ತೆ ರೈಲು ಸೇತುವೆ ಕೆಳ ಭಾಗದಲ್ಲಿ ಬಾಯಿ ತೆರೆದ ಸಾವಿನ ಗುಂಡಿಗಳು ನಿರ್ಮಾಣವಾಗಿದ್ದು ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

 

ರೈಲು ಕೆಳ ಸೇತುವೆ ರಸ್ತೆಯ ಸಂಪೂರ್ಣ ಹಾಳಾಗಿದ್ದು ತೆಗ್ಗು ಗುಂಡಿಗಳಿಂದ ಆವೃತವಾಗಿದೆ

ನೀರು ತುಂಬಿದರೆ ಗುಂಡಿಗಳು ಕಾಣುವುದಿಲ್ಲ. ಸವಾರರು ಗುಂಡಿಗಳಲ್ಲಿ ಬಿದ್ದ ಪ್ರಕರಣಗಳು ಯಥೇಚ್ಛವಾಗಿದ್ದು

ಕೈ ಕಾಲು ಮುರಿದುಕೊಂಡ ಘಟನೆಗಳು ಸಹ ನಡೆದಿದೆ.

 

ಈ ಬಗ್ಗೆ ನಗರಸಭೆ ಆಗಲಿ ಸಂಬಂಧಪಟ್ಟ ಅಧಿಕಾರಿಗಳೆ ಆಗಲಿ ಅವುಗಳ ದುರಸ್ತಿ ಬಗ್ಗೆ ತಲೆಕೆಡಿಸಿಕೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು. ಮುಚ್ಚದಿರುವುದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳು ತೊಂದರೆ ಅನುಭವಿಸುವಂತಾಗಿದೆ.

 

ಇವು ಅಮಾಯಕರ ಪಾಲಿಗೆ ಸಾವಿನ ಗುಂಡಿಗಳಾಗುತ್ತಿವೆ ಎಂಬುದು ಸ್ಥಳೀಯರ ಆರೋಪ. ಇಲ್ಲಿನ ರಸ್ತೆಗಳಲ್ಲಿ ಸುರಕ್ಷಿತವಾಗಿ ವಾಹನ ಓಡಿಸುವುದು ಎಂದರೆ ದೊಡ್ಡ ಸಾಹಸಕ್ಕೆ ಸಮ.

ಈಗಲಾದರೂ ನಗರಸಭೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಿ ರಸ್ತೆಯನ್ನು ಸುಧಾರಿಸಿ ಸವಾರರಿಗೆ ಅನುಕೂಲ ಮಾಡಿಕೊಡಬೇಕಿದೆ.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!