December 23, 2024

ಕುಷ್ಟಗಿಯಲ್ಲಿ ಬಿ.ಎಸ್.ಎನ್.ಎಲ್ ಪೋರ್ಟ್ ಅಭಿಯಾನ

 

 

ಕುಷ್ಟಗಿ: 

 

    ಖಾಸಗಿ ದೂರ ಸಂಪರ್ಕ ಕಂಪನಿ ಬೆಲೆ ಏರಿಕೆ ದರವನ್ನು ಖಂಡಿಸಿ, ಕೇಂದ್ರ ಸರ್ಕಾರ ಸೌಮ್ಯದ ಭಾರತ ಸಂಚಾರ ನಿಯಮಿತ ನಿಗಮವನ್ನು ಬೆಳಸಲು ಎಲ್ಲರೂ ಕೈಜೋಡಿಸಬೇಕು ಎಂದು ಹೈದರಾಬಾದ್ ಕರ್ನಾಟಕ ಯುವ ಶಕ್ತಿ ಸಂಘಟನೆಯ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷ ಬಸವರಾಜ ಗಾಣಗೇರ ಹೇಳಿದರು.

ಗುರುವಾರ ಬೆಳಿಗ್ಗೆ ಇಲ್ಲಿನ ಭಾರತ ಸಂಚಾರ ನಿಯಮಿತ ನಿಗಮದ ಕಚೇರಿ ಮುಂದೆ ಏರ್ಟೆಲ್, ಜಿಯೋ, ವಿಐ ಖಾಸಗಿ ಕಂಪನಿಗಳ ಬೆಲೆ ಏರಿಕೆ ಪೋರ್ಟ್ ಅಭಿಯಾನ ನಡೆಸಿ ಮಾತನಾಡಿದ ಅವರು ಖಾಸಗಿ ಕಂಪನಿಗಳು ಬೆಳೆಯುವ ಉದ್ದೇಶದಿಂದ ಸಾರ್ವಜನಿಕರಿಗೆ ಅನೇಕ ರಿಯಾಯಿತಿ ಸೌಲಭ್ಯಗಳನ್ನು ನೀಡಿ ಕಂಪನಿಗಳು ಅತ್ಯಧಿಕವಾಗಿ ಬೆಳೆದು ಈಗ ಏಕಾಏಕಿ ಬೆಲೆ ಏರಿಕೆ ಮಾಡಿ ಜನರನ್ನು ವಂಚಿಸುತ್ತಿದ್ದಾರೆ.

ಅಂತಹ ಕಂಪನಿಗಳಿಗೆ ಪಾಠ ಕಲಿಸುವ ಸಮಯ ಬಂದಿದೆ ಏಲ್ಲರೂ ಸೇರಿ ಕೇಂದ್ರ ಸರ್ಕಾರದ ಭಾರತ ಸಂಚಾರ ನಿಯಮಿತ ನಿಗಮವು ನೀಡುವ ವಿಶೇಷ ಕೊಡುಗೆ ಪಡೆಯಲು ಪೋರ್ಟ್ ಅಭಿಯಾನ ಮಾಡುತ್ತಿದ್ದು ಏಲ್ಲರೂ ಕೈ ಜೋಡಿಸಿ ಬಿ.ಎಸ್.ಎನ್.ಎಲ್ ಬೆಂಬಲಿಸಬೇಕು ಎಂದು ಹೇಳಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ನಜೀರಸಾಬ ಮೂಲಿಮನಿ ಮಾತನಾಡಿ ಕೇಂದ್ರ ಸರ್ಕಾರದ ಸಾರ್ವಜನಿಕ ಸಂಪರ್ಕ ಇಲಾಖೆಯು ಬಿ.ಎಸ್.ಎನ್.ಎಲ್ ಮೂಲಕ ಗ್ರಾಮೀಣ ಪ್ರದೇಶ ಹಾಗೂ ಪಟ್ಟಣದ ಜನರಿಗೆ ವಿಶೇಷ ಕೊಡುಗೆ ನೀಡುತ್ತಿದೆ.

ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಸುಮಾರು 

ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ತಾಲೂಕು ಅಧ್ಯಕ್ಷ ಫಾರೂಖ್ ಡಾಲಾಯತ್, ಬಿ.ಎಸ್.ಎನ್.ಎಲ್ ಜೆ.ಟಿ.ಓ ಇಂಜಿನೀಯರ್ ಶ್ರೀನಿವಾಸ, ಮೆಹೆಬೂಬ ನೆರೆಬೆಂಚಿ, ಉದಯ, ಸದ್ದಾಂ ಹುಸೇನ್ ಹಾಗೂ ಗ್ರಾಹಕರು ಉಪಸ್ಥಿತರಿದ್ದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!