December 23, 2024

ನಟ ಶಿವರಾಜಕುಮಾರ ಹುಟ್ಟು ಹಬ್ಬ : ಮಕ್ಕಳಿಗೆ ನೋಟಬುಕ್ ವಿತರಣೆ.

 

ಗಜೇಂದ್ರಗಡ::

 

ಸ್ಯಾಂಡಲ್ ವುಡ್ ನ ಅಣ್ಣಾ ಎಂದೇ ಖ್ಯಾತಿ ಪಡೆದಿರುವ ಡಾ. ಶಿವರಾಜಕುಮಾರ್ ಅವರ 62ನೇ ಹುಟ್ಟುಹಬ್ಬದ ಅಂಗವಾಗಿ ಸಮೀಪದ ಬ್ರೈಟ್ ಬಿಗಿನಿಂಗ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳಿಗೆ ನೋಟ್ ಬುಕ್ ವಿತರಣೆ ಮಾಡುವ ಮೂಲಕ ನಟ ಶಿವರಾಜ್ ಕುಮಾರ್ ಹುಟ್ಟು ಹಬ್ಬವನ್ನು ಆಚರಣೆ ಮಾಡಲಾಯಿತು.

 

 

ಬಳಿಕ ಜೆ.ಡಿ.ಎಸ್.ಪಕ್ಷದ ಜಿಲ್ಲಾಧ್ಯಕ್ಷ ಮಕ್ತುಂಸಾಬ ಮುಧೋಳ ಮಾತನಾಡಿ ರಾಜ ಕುಟುಂಬದ ಕುಡಿ, ಸರಳತೆಗೆ ಹೆಸರುವಾಸಿ, ಯಾರಿಗೆ ಕಷ್ಟ ಅಂದರೆ ಮಿಡಿಯುವ ಹೃದಯ ಶ್ರೀವಂತಿಕೆ ಉಳ್ಳ ಡಾ.ಶಿವರಾಜಕುಮಾರ ಹುಟ್ಟು ಹಬ್ಬವನ್ನು ಮುದ್ದು ಮಕ್ಕಳಿಗೆ ನೋಟಬುಕ್ ನೀಡಿದ್ದು ಅವರ ಹುಟ್ಟುಹಬ್ಬದ ಸಾರ್ಥಕತೆಯ ಚಿಂತನೆಯಾಗಿದೆ. ಇಂತಹ ಚಿಂತನೆಯುಳ್ಳ ಅಭಿಮಾನಿ ಬಳಗದ ಸರ್ವ ಸದಸ್ಯರುಗಳಿಗೆ ಅನಂತ ಅಭಿನಂದನೆಗಳು ಎಂದರು.

ಬಳಿಕ ಬಾಷೆಸಾಬ ಕರ್ನಾಚಿ ಮಾತನಾಡಿ ಇಂದು (ಜುಲೈ 12) ಶಿವರಾಜ್ ಕುಮಾರ್ ಹುಟ್ಟುಹಬ್ಬ. ಈ ಬಾರಿ ಅವರು ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವುದಾಗಿಯೂ ಅಭಿಮಾನಿಗಳಿಗೆ ಸಿಗಲಾಗುವುದಿಲ್ಲ ಎಂದು ಶಿವಣ್ಣ ಈಗಾಗಲೇ ಘೊಷಣೆ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಏನಾದರೂ ಉಪಯುಕ್ತ ಆಚರಣೆ ಮಾಡೋಣ ಎಂದಾಗ ಶಾಲಾ ಮಕ್ಕಳಿಗೆ ನೋಟಬುಕ್ ವಿತರಣೆ ಮಾಡೋಣ ಎಂದಾಗ ಎಲ್ಲಿ ಕೊಡೋಣ ವಿಚಾರದಲ್ಲಿದ್ದಾಗ ಬ್ರೈಟ್ ಬಿಗಿನಿಂಗ್ ಶಾಲೆಯಲ್ಲಿ ಮಕ್ಕಳು ಶೈಕ್ಷಣಿಕ ಜೀವನ ಪ್ರಾರಂಭ ಹಂತದಲ್ಲಿದ್ದಾರೆ ಅಂತಹ ಮಕ್ಕಳಿಗೆ ವಿತರಣೆ ಮಾಡಿದರೆ ಸಾರ್ಥಕವಾಗುತ್ತದೆ. ಅದಕ್ಕೆ ಶಿವಣ್ಣ ಹುಟ್ಟು ಹಬ್ಬವನ್ನು ಈ ಬಾರಿ ಮುದ್ದು ಮಕ್ಕಳೊಡನೆ ಆಚರಣೆ ಮಾಡಿದ್ದೇವೆ ಎಂದರು.

 

ಬಳಿಕ ಡಾ.ರಾಜಕುಮಾರ ಅಭಿಮಾನಿ ಬಳಗದ ಅಧ್ಯಕ್ಷ ಸಂಗಪ್ಪ ಮಾತನಾಡಿ ಹುಟ್ಟು ಹಬ್ಬ ಆಚರಣೆ ಎಂದರೆ ಆಡಂಬರ, ಕೇಕ್ ಹಾಗೂ ಇನ್ನಿತರ ಮೋಜು ಮಸ್ತಿ. ಇವುನ್ನೆಲ್ಲಾ ಹೊರತು ಪಡಿಸಿ ಇಡೀ ದೇಶಕ್ಕೆ ಮಾದರಿಯಾದ ಡಾ.ರಾಜ್ ವಂಶದ ಕುಡಿಯ ಹುಟ್ಟಿದ ದಿನ ಏನಾದರೂ ವಿಶೇಷವಾಗಿ ಮಾಡಬೇಕೆಂದು ತೀರ್ಮಾನ ಮಾಡಿದಾಗ ಶಿವಣ್ಣಗೆ ಮಕ್ಕಳು ಎಂದರೆ ಪಂಚಪ್ರಾಣ ಅಂತಹ ಮುದ್ದು ಮಕ್ಕಳಿಗೆ ನೋಟಬುಕ್ ವಿತರಣೆ ಮಾಡಿದ್ದೇವೆ. ಈ ಸಂದರ್ಭದಲ್ಲಿ ಕೇಕ್ ಕತ್ತರಿಸುವುದನ್ನು ಪರಂಪರೆಯನ್ನು ಬಿಟ್ಟು ಉಪಯುಕ್ತ ಹುಟ್ಟುಹಬ್ಬದ ಆಚರಣೆಗೆ ಮುಂದಾಗಿದ್ದೇವೆ ಎಂದರು.

 

 

ಕಾರ್ಯಕ್ರಮದಲ್ಲಿ  ಸಂಸ್ಥೆಯ ಅಧ್ಯಕ್ಷ ಸೀತಲ ಓಲೇಕಾರ   ಮಹ್ಮದರಫೀಕ ಕಾತರಕಿ, ರವಿ ಮೋಹಿತೆ,    ಮುಸ್ತಾಕ ಹುಟಗೂರ, ಶಮಶುದ್ದೀನ ಕಟಮ್ಮಲಿ, ಶಂಕರ ಬಾಂಡಗೆ, ಬಾಷೇಸಾಬ ಬಾಗವಾನ, ಶಾಲೆಯ ಮುಖ್ಯ ಶಿಕ್ಷಕಿ ನಾಜೀಯಾ ಮುದಗಲ್, ಶಿಕ್ಷಕಿಯರಾದ ಅನುಷಾ ತಳವಾರ, ರೂಪಾ ಗೊಂದಳೆ, ಆಸ್ಮಾ ನಧಾಫ್, ರವಿ ನಿಡಗುಂದಿ, ಅಸ್ಪಾಕ ಹುಟಗೂರ, ಸಾವಿತ್ರಿ ಹಾವೇರಿ, ಲಕ್ಷ್ಮಿ ಬೋನೇರಿ, ರೇಣುಕಾ ಕೊಪ್ಪದ, ಅಂಜುಮ್ ಸೇರಿದಂತೆ ಮುದ್ದು ಮಕ್ಕಳು ಇದ್ದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!