December 23, 2024

ಫಲವತ್ತಾದ ಭೂಮಿಗಳಲ್ಲಿ ಸೋಲಾರ್ ಪ್ಲಾಂಟ್ ಗಳಿಗೆ ಅನುಮತಿ ನೀಡದಿರಿ: ಸೋಮರೆಡ್ಡಿ ತಳಕಲ್. 

 

ಕುಕನೂರು.

 

ಜಿಲ್ಲಾಡಳಿತವು ಫಲವತ್ತಾದ ಭೂಮಿಗಳಲ್ಲಿ ಸೋಲಾರ್ ಪ್ಲಾಂಟ್ ಗಳ ನಿರ್ಮಾಣಕ್ಕೆ ಅನುಮತಿ ನೀಡಬಾರದು ಎಂದು ಸಾಮಾಜಿಕ ಹೋರಾಟಗಾರ ಹಾಗೂ ನಿವೃತ್ತ ಪ್ರಾಧ್ಯಾಪಕ ಸೋಮರೆಡ್ಡಿ ತಳಕಲ್ ಆಗ್ರಹಿಸಿದರು.

 

ಪಟ್ಟಣದ ಐಬಿಯಲ್ಲಿ ಪತ್ರಿಕಾ ಘೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಜಿಲ್ಲೆಯ ಕೊಪ್ಪಳ ತಾಲೂಕಿನ ಕವಲೂರು ಅಳವಂಡಿ ಹಾಗೂ ಗುಡಿಗೇರಿ ಕುಕನೂರು ತಾಲೂಕಿನ ತಳಕಲ್ಲ, ಲಕಮಾಪೂರ,ಅಡವಿಹಳ್ಳಿ, ಬನ್ನಿಕೊಪ್ಪ ಸೀಮಾಗಳ ಸಾವಿರಾರು ಎಕ್ಕರೆಯ ಫಲವತ್ತದ ಭೂಮಿಗಳನ್ನು ಸೋಲಾರ್ ಪ್ಲಾಂಟ್ ನಿರ್ಮಾಣಕ್ಕಾಗಿ ಖಾಸಗಿ ಕಂಪನಿಗಳಿಗೆ ಪರವಾನಿಗೆ ನೀಡುತ್ತಿದ್ದು, ಭಾಗಗಳಲ್ಲಿ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಕಾಮಗಾರಿಗಳು ಪ್ರಗತಿ ಹಂತದಲ್ಲಿದ್ದು ಈ ಭಾಗದ ಜಮೀನುಗಳಿಗೆ ನೀರಾವರಿ ಸೌಲಭ್ಯವನ್ನು ಒದಗಿಸುವ ಯೋಜನೆ ಇದಾಗಿದ್ದು ಬಹುತೇಕ ಕಾಮಗಾರಿ ಮುಗಿಯುವ ಅಂತದಲ್ಲಿದೆ. ಈ ಕಾಮಗಾರಿಗೆ 39,000 ಕೋಟಿ ರೂಪಾಯಿಗಳ ವಿನಿಯೋಗ ಮಾಡಿದೆ.

ಇಂತಹ ಜಮೀನುಗಳಲ್ಲಿ ಖಾಸಗಿ ಕಂಪನಿಯ ಸೋಲಾರ್ ಪ್ಲಾಂಟ್ ಗಳನ್ನು ನಿರ್ಮಿಸಲು ಜಿಲ್ಲಾಡಳಿತ ಪರವಾನಿಗೆ ನೀಡುತ್ತಿರುವುದು ವಿಪರ್ಯಾಸವಾಗಿದ್ದು, ಸೋಲಾರ್ ಪ್ಲಾಂಟ್ ಗಳ ನಿರ್ಮಾಣದಿಂದ ಫಲವತ್ತಾದ ಭೂಮಿಯು ರೈತರ ಕೈ ಜಾರಲ್ಲಿದ್ದು, ಮುಂದಿನ ಪೀಳಿಗೆಯ ಆಹಾರ ಭದ್ರತೆಗಾಗಿ ಜಿಲ್ಲಾಡಳಿತವು ತನ್ನ ಅನುಮತಿಯನ್ನು ಹಿಂಪಡೆಯಬೇಕು.

ಕರ್ನಾಟಕ ನೀರಾವರಿ ನಿಗಮವು ಈ ಜಮೀನುಗಳಲ್ಲಿ ಸೋಲಾರ್ ಪ್ಲಾಂಟ್ಗಳಿಗೆ ಅನುಮತಿಯನ್ನು ನಿರಾಕರಿಸುವಂತೆ ಈ ಬಗ್ಗೆ ಸ್ಪಷ್ಟವಾಗಿ ಹೇಳಿದೆ.

 

ಈಗಲಾದರೂ ಜಿಲ್ಲಾಡಳಿತವು ಸೋಲಾರ್ ಪ್ಲಾಂಟ್ ಸ್ಥಾಪಿಸಲು ಅನುಮತಿಯನ್ನು ಹಿಂಪಡೆದು ಯಾವುದಾದರೂ ಬಂಜರು ಭೂಮಿ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ಸೋಲಾರ್ ಪ್ಲಾಂಟ್ ಗಳನ್ನು ನಿರ್ಮಿಸಬೇಕು ಎಂದು ಹೇಳಿದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!