December 23, 2024

ಅಂಗನವಾಡಿ ಪ್ರಾರಂಭೋತ್ಸವ : ಮಕ್ಕಳಿಗೆ ಹೂವು ಕೊಟ್ಟು ಸ್ವಾಗತಿಸಿದ ಗ್ರಾಮಸ್ಥರು.

ಯಲಬುರ್ಗಾ ; ತಾಲೂಕಿನ ಯಡ್ಡೋಣಿ ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿ ಪ್ರಾರಂಭೋತ್ಸವ ಹಾಗೂ ಅಂಗನವಾಡಿಯಿಂದ 1 ನೇ ತರಗತಿಗೆ ತೆರಳಿದ ವಿದ್ಯಾರ್ಥಿಗಳಿಗೆ ಬಿಳ್ಕೋಡಿಗೆ ಕಾರ್ಯಕ್ರಮ ಜರುಗೀತು

ಗ್ರಾಮ ಪಂಚಾಯತ ಸದಸ್ಯ ಶಂಕ್ರಮ್ಮ ಬೀಜಕಲ್ ಹಾಗೂ ಮುಖಂಡರು, ಪಾಲಕರು ಮಕ್ಕಳಿಗೆ ಹೂವು ಕೊಟ್ಟು ಜ್ಯೋತಿ ಬೆಳಗಿಸಿ ಮಕ್ಕಳನ್ನ ಅಂಗನಾಡಿ ಶಾಲೆಗೆ ಬರಮಾಡಿಕೊಂಡರು ಇದೇ ಅಂಗನವಾಡಿ ಶಾಲೆಯಿಂದ 1ನೇ ತರಗತಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಸರಸ್ವತಿ ಪೂಜಾ ಕಾರ್ಯಕ್ರಮ ಹಮ್ಮಿಕೊಂಡು ಮಕ್ಕಳಿಗೆ ಸಿಹಿ ಊಟ ಬಡಿಸಿ ಮಕ್ಕಳಿಗೆ ಬಿಳ್ಕೋಡಲಾಯಿತು.

ಅಂಗನವಾಡಿ ಮೆಲ್ವಿಚಾರಕಿ ಗಿರಿಜಾ ಕಡಿವಾಲರ ಮಾತನಾಡಿ ಪಾಲಕರು ಮಕ್ಕಳನ್ನ ಅಂಗನವಾಡಿ ಶಾಲೆಗೆ ಕಳಿಸುವದರ ಮೂಲಕ ಮಕ್ಕಳ ಶಿಕ್ಷಣಕ್ಕೆ ನಾಂದಿ ಹಾಡಿದಂತೆ ನಿಮ್ಮ ಮಕ್ಕಳನ್ನ ತಪ್ಪದೆ ಅಂಗನವಾಡಿ ಶಾಲೆಗೆ ಕಳಿಸಿ ಯಾವ ಮಕ್ಕಳು ಅಪೌಷ್ಟಿಕತೆಯಿಂದ ಬಳಲ ಬಾರದೆಂದು ಸರಕಾರ ಅಂಗನವಾಡಿ ಕೇಂದ್ರಗಳ ಮೂಲಕ ಪೌಷ್ಠಿಕ ಆಹಾರ ನೀಡುತ್ತದೆ ಇದನ್ನ ಸದುಪಯೋಗ ಪಡೆದುಕೊಂಡು ಮಕ್ಕಳಿಗೆ ಸದೃಡವಾಗಿ ಬೆಳೆಯಲು ಪ್ರೋತ್ಸಾಹಿಸ ಬೇಕೆಂದರು

ಅಂಗನವಾಡಿ .ಕಾರ್ಯಕರ್ತೆ ಹನಮಕ್ಕ ಗುನ್ನಾಳ ಪದ್ಮಾ ಚಿಕ್ಕವಂಕಲಕುಂಟಾ ಮುಖಂಡರುಗಳಾದ ಮರಿಯಪ್ಪ ದಳಪತಿ,ಮರಿಯಪ್ಪ ಹುಗ್ಗಿ. ಬಸವದಾಜ ಹುಗ್ಗಿ ,ಆದೇಶ ರೋಟ್ಟಿ, ಶಿಕ್ಷಕಿ ಸವೀತಾ.ಅತಿಥಿ ಶಿಕ್ಷಕ ಶುಖಮುನಿ ಚೌಡ್ಕಿ, ಅಂಗನವಾಡಿ ಕಾರ್ಯಕರ್ತೆ ಹನಮಕ್ಕ ಎಸ್.ಗುನ್ನಾಳ, ಪದ್ಮಾವತಿ ವಂಕಲಕುಂಟಾ.ಆಶಾ ಕಾರ್ಯಕರ್ತೆಯರಾದ ರೇಣುಕಾ ಬಡಗಿ,ಕಮಲಾಕ್ಷಿ ಹಿರೇಮಠ.ಸೇರಿದಂತೆ ಮತ್ತೀತರರು ಭಾಗವಹಿಸಿದ್ದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!