December 23, 2024

ನನಗೆ ಮಂತ್ರಿಗಿರಿ ಅವಶ್ಯಕತೆ ಇಲ್ಲ;ಮೃದುವಾಗಿ ತಿವಿದ ಸವದಿ 

 

ಅಥಣಿ :

ಲೋಕಸಭೆ ಚುನಾವಣೆ ಬಳಿಕ ಸಾಕಷ್ಟು ಸುದ್ದಿಯಲ್ಲಿದ್ದ ಸವದಿ & ಜಾರಕಿಹೊಳಿ  ಟಾಕ್ ವಿವಾದಕ್ಕೆ ಸವದಿ ಹೊಸ ಬಾಂಬ್ ಸಿಡಿಸಿದ್ದು ತೀವ್ರ ಕುತೂಹಲ ಮೂಡಿಸಿದೆ.

 

ಲೋಕಸಭೆ ಚುನಾವಣೆಯಲ್ಲಿ ಅಥಣಿ ಕ್ಷೇತ್ರದಲ್ಲಿ ಬಿಜೆಪಿ ಗೆ ಬಹುಮತ ಕುರಿತು ಸಚಿವ ಸತೀಶ ಜಾರಕಿಹೊಳಿ ಸ್ಥಳೀಯ ಶಾಸಕ ಲಕ್ಷ್ಮಣ ಸವದಿ ವಿರುದ್ಧ ಅಸಮಧಾನ ಹೊರ ಹಾಕಿದ್ದರು.ಆದ್ರೆ ಇಷ್ಟು ದಿನ ಆದ್ರೂ ಸೈಲೆಂಟ್ ಆಗಿದ್ದ ಶಾಸಕ ಲಕ್ಷ್ಮಣ ಸವದಿ ಪರೋಕ್ಷವಾಗಿ ಮಾತಿನಲ್ಲೇ ಜಾರಕಿಹೊಳಿಗೆ ತಿವಿದರಾ ಅನ್ನೋ ಅನುಮಾನ ವೇಕ್ತವಾಗಿದೆ.

 

ಅಥಣಿ ಪಟ್ಟಣದಲ್ಲಿ ನಡೆದ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕ ಲಕ್ಷ್ಮಣ ಸವದಿ ವೇದಿಕೆ ಮೇಲೆ ಬದುಕು ಶಾಶ್ವತವಲ್ಲ, ಅಧಿಕಾರವು ಶಾಶ್ವತ ವಲ್ಲ ನಾವು ಮಾಡುವ ಒಳ್ಳೆ ಕಾರ್ಯ  ನಮ್ಮನ್ನ ಗುರುತಿಸುತ್ತದೆ. ಯಾರೋ ತಿಳ್ಕೊಂಡಿರಬಹುದು ಸಚಿವ ಸ್ಥಾನಕ್ಕಾಗಿ ನಾನು ಯಾರ ಹತ್ರನು ಕೈ ಒಡ್ಡಲ್ಲ. ಮರೆತು ಬೀಡಿ ಎಂಬ ಮಾತಿನ ಮೂಲಕ ಚಾಟಿ ಬಿಸಿದ್ರ ಎಂಬ ಮಾತು ಕೇಳಿಬರುತ್ತಿದೆ.

 

ವರದಿ ಲಕ್ಕಪ್ಪ ನಾಯ್ಕ್.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!