ಯಲಬುರ್ಗಾ.
ತಾಲೂಕಿನಲ್ಲಿರುವ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕುಡಿಯುವ ನೀರು ಸಮಸ್ಯೆಯಾಗದಂತೆ ಎಇಇ ಮತ್ತು ಪಿ.ಡಿ.ಓ ರವರು ಕ್ರಮ ವಹಿಸಬೇಕು. ಗುಣಮಟ್ಟದ ಪೈಪ್ ಲೈನ್ ಹಾಕಬೇಕು ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ಬಸವರಾಜ ರಾಯರೆಡ್ಡಿ ಅವರು ಹೇಳಿದರು.
ಇಂದು ಯಲಬುರ್ಗಾ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತಿ ಕೊಪ್ಪಳ, ತಾಲೂಕು ಪಂಚಾಯತಿ ಯಲಬುರ್ಗಾ ವತಿಯಿಂದ ಮಾನ್ಯ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು, ಶಾಸಕರ ಅಧ್ಯಕ್ಷತೆಯಲ್ಲಿ ಜರುಗಿದ ತ್ರೈಮಾಸಿಕ ಕೆ.ಡಿ.ಪಿ ಸಭೆಯಲ್ಲಿ ಅವರು ಮಾತನಾಡಿದರು.
ಇವತ್ತು ಹಳ್ಳಿಗಳಲ್ಲಿ ಇನ್ನು ಬಡತನ ಇದೆ. ಅವರ ಪರವಾಗಿ ನಾವು ಕೆಲಸ ಮಾಡಲು ಅಧಿಕಾರಿಗಳು ಸಾಥ್ ನೀಡಬೇಕು.
ಈ ಬಾರಿ ಹೆಚ್ಚಿನ ಅನುದಾನ ತಂದು ಗ್ರಾಮೀಣ ರಸ್ತೆಗಳನ್ನು ಮಾಡಬೇಕು. ತಮ್ಮ ವಿಭಾಗದಿಂದ ಹೆಚ್ಚಿನ ಕೆಲಸ ಮಾಡಬೇಕು. ಜನ ಸೇವೆ ಮಾಡಲು ಬಂದಿದಿರಿ. ಚನ್ನಾಗಿ ಕೆಲಸ ಮಾಡಿ ಎಂದರು.
ಸಾಮಾಜಿಕ ಅರಣ್ಯ ಇಲಾಖೆಯಿಂದ 2 ಕೋಟಿ ಗಿಡಗಳನ್ನು ನೆಟ್ಟಿದ್ದಾರೆ. ಈ ಸಾರಿ ಕೆಲವು ರಸ್ತೆಗಳನ್ನು ತೆಗೆದುಕೊಂಡು ನೀಟಾಗಿ ಗಿಡ ಬೆಳೆಸಿ ತೊರಿಸಿ. ಕಳೆದ ಬಾರಿ ಆಗಿರುವುದನ್ನು ಪರಿಶೀಲಿಸುತ್ತೇನೆ ಎಂದರು.
ನರ್ಸರಿಗಳಲ್ಲಿ ಗುಣಮಟ್ಟದ ಸಸಿಗಳನ್ನು ಬೆಳೆಸಬೇಕು. ಸರಿಯಾಗಿ ಆಗಬೇಕು. ಈ ವಾತಾವರಣಕ್ಕೆ ಹೊಂದಿಕೊಳ್ಳುವ ಬೇವು, ಆಲ, ಹತ್ತಿಹಣ್ಣು, ಮಲ್ಲಾಡ್ ಹುಣಸೆ ಮುಂತಾದವುಗಳನ್ನು ಬೆಳೆಸಬೇಕು. ಅದರಿಂದ ಪ್ರಾಣಿ, ಪಕ್ಷಿ, ಜನರಿಗೆ ಅನುಕೂಲ ಆಗಬೇಕು ಎಂದು ಸಲಹೆ ನೀಡಿದರು.
ಕೃಷಿ ಇಲಾಖೆಯಿಂದ ರೈತರಿಗೆ ಅನುಕೂಲ ಆಗುವ ಸ್ಪಿಂಕ್ಲರ್ ಹಾಗೂ ಟ್ರ್ಯಾಕ್ಟರ್ ಸಲಕರಣೆಗಳನ್ನು ಬೇಡಿಕೆಗೆ ತಕ್ಕಂತೆ ಕೊಡುವ ವ್ಯವಸ್ಥೆ ಮಾಡಿಕೊಡಬೇಕು. ಕೃಷಿ ಸಚಿವರ ಬಳಿ ಮಾತಾಡಿ ಹೆಚ್ಚುವರಿ ಮಾಡಿಕೊಡಿಸುವ ಭರವಸೆ ನೀಡಿದರು.
ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಸಾಕಷ್ಟು ಯೋಜನೆಗಳು ಇದ್ದು, ಅವುಗಳ ಸದುಪಯೋಗ ಅಗಬೇಕು. ಮಾವು, ದ್ರಾಕ್ಷಿ, ದಾಳಿಂಬೆ, ಸೀಬೆ, ಪಪ್ಪಾಯಿ, ತೆಂಗು ಮುಂತಾದವುಗಳನ್ನು ಬೆಳೆಯಲು ಅನುಕೂಲ ಮಾಡಿಕೊಡಬೇಕು.
ಒಂದು ಹೆಕ್ಟರ್ ಗೆ 16 ಸಾವಿರ ಸಬ್ ಸಿಡಿ ಕೊಡ್ತದೆ. ಹಾಗೇ 50 ಹೆಕ್ಟೆರ್ ಕೊಡಲು ಸಚಿವರಿಗೆ ಹೆಳ್ತೆನೆ.
ತೋಟಗಾರಿಕೆ ಇಲಾಖಯಿಂದ ಯಲಬುರ್ಗಾದಲ್ಲಿ ರೈತರ ಮೇಳ ಮಾಡಿ ಇಲ್ಲಿನ ರೈತರಿಗೆ ಅನುಕೂಲವಾಗುವ ಬೆಳೆಗಳ ಪ್ರಾತ್ಯಕ್ಷಿಕೆ ಮಾಡಿ ಎಂದರು.
ಆರೋಗ್ಯ ಇಲಾಖೆ ಮಾನ್ಸುನ್ ರೋಗಗಳು, ಡೆಂಗ್ಯು ಪ್ರಕರಣಗಳ ಕುರಿತು ಏನೇನು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮಾಹಿತಿ ಪಡೆದ ಅವರು, ಮುಂದೆ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದರು.
ವಿಶೇಷ ಪ್ರಕರಣದಡಿ ಬಳಿಗೇರಿ, ಬಂಡಿ, ಚಿಕ್ಕಮ್ಯಾಗೇರಿ ಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಶೀಘ್ರದಲ್ಲೆ ಉದ್ಘಾಟನೆ ಮಾಡಬೇಕಿದೆ. ಅದಕ್ಕೆ ಎಲ್ಲ ರೀತಿಯ ಸಿದ್ದತೆ ಮಾಡಿಕೊಳ್ಳಬೇಕು. ಡಾಕ್ಟರ್ ಕೂಡ ಜನ ಸೇವೆ ಮಾಡಬೇಕು ಎಂದರು.
ನಂತರ ವಿವಿಧ ಇಲಾಖೆ ಸಭೆಯಲ್ಲಿ ತಮ್ಮ ಇಲಾಖೆಯ ಪ್ರಗತಿ ವರದಿಯನ್ನು ಪ್ರಸ್ತಾಪಿಸಿದರು. ಸಭೆಯಲ್ಲಿ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಾಪಂ ಕುಕನೂರ ಹಾಗೂ ಯಲಬುರ್ಗಾ, ಅವಳಿ ತಾಲೂಕಿನ ತಹಶೀಲ್ದಾರರು, ಸಿ.ಪಿ.ಐ ಸಾಹೇಬರು. ತಾಲೂಕ ಮಟ್ಟದ ಅಧಿಕಾರಿಗಳು, PDO ರವರು, KDP ನಾಮ ನಿರ್ದೇಸಿತ ಸದಸ್ಯರು, ತಾಪಂ ಸಿಬ್ಬಂದಿಗಳು ಹಾಜರಿದ್ದರು.
More Stories
ವಿದ್ಯಾರ್ಥಿಗಳು ವೃಥಾ ಕಾಲಹರಣ ಮಾಡದೇ ಸಮಯಕ್ಕೆ ಮಹತ್ವ ನೀಡಿ; ಸತ್ಯನಾರಾಯಣಪ್ಪ ಹರಪನಹಳ್ಳಿ
ಮುದ್ದೇಬಿಹಾಳದಲ್ಲಿ ಪತ್ರಿಕಾ ದಿನಾಚರಣೆ : ಪತ್ರಕರ್ತರಿಗೆ ಸೌಲಭ್ಯ ಒದಗಿಸಲು ಸರ್ಕಾರದ ಮೀನಮೇಷ-ಬಂಗ್ಲೆ ಮಲ್ಲಿಕಾರ್ಜುನ.
ಹಿಂದುತ್ವದ ಮಹತ್ವ ತಿಳಿಸುವ ಕಾರ್ಯ ಸ್ಲಾಗನಿಯ ;ಶ್ರೀಧರ ಮುರಡಿ ಹಿರೇಮಠದ ಶ್ರೀಗಳು