December 22, 2024

ಉನ್ನತಿಕರಿಸಿದ ಶಾಲಾ ಕಟ್ಟಡ ಉದ್ಘಾಟನೆ.

ಕುಷ್ಟಗಿ:ಜು ೧೩.

 

ಬಿಜಕಲ್ ಕ್ಲಸ್ಟರ್ ವ್ಯಾಪ್ತಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಉನ್ನತೀಕರಿಸಿ ಹಿರಿಯ ಪ್ರಾಥಮಿಕ ಶಾಲೆಯನ್ನಾಗಿ ಇಲಾಖೆ ಮಾಡಿದ್ದು ಮೊದಲು ಒಂದರಿಂದ ಐದು ಇದ್ದು ಈಗ ಆರನೇ ತರಗತಿಯನ್ನು ಉನ್ನತೀಕರಿಸಿದ ಪ್ರಯುಕ್ತವಾಗಿ  ದೊಡ್ಡನಗೌಡ ಪಾಟೀಲ್ ಶಾಸಕರು ಹಾಗೂ ವಿರೋಧ ಪಕ್ಷದ ಮುಖ್ಯ ಸಚೇತಕ  ಅವರು ಉದ್ಘಾಟಿಸಿದರು.

 

 

 

ಕಾಯ೯ಕಮದ ಅಧ್ಯಕ್ಷತೆಯನ್ನು ಗ್ರಾಪಂ ಪಂಚಾಯಿತಿಯ ಅಧ್ಯಕ್ಷರಾದ  ಗೌಡಪ್ಪಗೌಡ ಅವರು ವಹಿಸಿದ್ದರು  ಸಮಾರಂಭದಲ್ಲಿ ಗ್ರಾಮ ಪಂಚಾಯಿತಿಯ ಸದಸ್ಯರುಗಳು ಎಸ್ ಡಿ ಎಮ್ ಸಿ ಸದಸ್ಯರು ಗ್ರಾಮದ ಗುರುಹಿರಿಯರು ಭಾಗವಹಿಸಿದ್ದರು ಪ್ರಾಸ್ತಾವಿಕವಾಗಿ  ಮಲ್ಲೇಶ್ ಕಿರಗಿ ಸಮೂಹ ಸಂಪನ್ಮೂಲ ವ್ಯಕ್ತಿ ಬಿಜಕಲ್ ರವರು ಮಾತನಾಡಿ 2023-24 ರ ಶೈಕ್ಷಣಿಕ ವರ್ಷದಿಂದ ಶಾಲಾ ಎಸ್ ಡಿ ಎಂ ಸಿ . ಗ್ರಾಮದ ಗುರು ಹಿರಿಯರ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರುಗಳ ಮೇಲಿಂದ ಮೇಲೆ ಸಭೆ ಮಾಡಿ 5ನೇ ತರಗತಿ ಯಲ್ಲಿಮಕ್ಕಳ ಸಂಖ್ಯೆ ಬಹಳಷ್ಟು ಇದ್ದು ಶಾಲಾ ದಾಖಲಾತಿ ಸುಮಾರು ಎರಡು ನೂರಕ್ಕಿಂತ ಹೆಚ್ಚಿದ್ದು ಮುಂದಿನ ತರಗತಿಗೆ ದಾಖಲಾಗಲು ನಿರಾಸಕ್ತಿ ವಹಿಸಿದ್ದನ್ನು. ವಲಸೆ ಹೋಗುವುದು ಶಾಲೆ ಬಿಡಿಸುವುದು ಹೀಗಿರುವಾಗ ಇಲಾಖೆಗೆ ಉನ್ನತೀಕರಿಸಲು ತೀರ್ಮಾನಿಸಿ ಮನವಿ ಸಲ್ಲಿಸಲಾಗಿದ್ದು ಈಗ 2024-25 ನೇ ಸಾಲಿನಲ್ಲಿ ಆರನೇ ತರಗತಿ ಉನ್ನತೀಕರಿಸಿ ಇಲಾಖೆ, ಆದೇಶಿಸಲಾಗಿದೆ ಎಲ್ಲಾ ಮಕ್ಕಳು ಮೂಲಭೂತ ಸೌಲಭ್ಯ. ಹಾಗೂ ಕಲಿಕೆಯಲ್ಲಿ ಸಹಕರಿಸಲು ಎಂದು ಹೇಳಿದರು .

ವರದಿ; ಶರಣಪ್ಪ ಲೈನದ್ ಹಿರೇಮನ್ನಾಪೂರ

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!