ಅಥಣಿ :
ಸರಕಾರದ ಸಹಾಯ ಕಿಂಚಿತ್ತೂ ಯಾಚಿಸದೆ ದೇಣಿಗೆ ಪಡೆದುಕೊಳ್ಳದೇ ಕರ್ನಾಟಕದಾಧ್ಯಂತ ಶಾಲಾ ಮಕ್ಕಳಿಗೆ ನೋಟ್ ಬುಕ್ ಸೇರಿದಂತೆ ಇಂದು ಅಥಣಿಯ ವಿವಿಧ ಸರ್ಕಾರಿ ಶಾಲೆಗಳಿಗೆ 27,000 ನೋಟ್ ಬುಕ್ ಗಳನ್ನು ನೀಡುತ್ತಿರುವುದು ಹಾಗೂ ಹಲವಾರು ಸಹಾಯ ಸಹಕಾರ ನೀಡುತ್ತಿರುವ ಸುಂದರ ಭಾರತ ಟ್ರಸ್ಟ್ ಹಾಗೂ ಸುಂದರ ಭಾರತ ಟ್ರಸ್ಟ್ ನ ಮುಖ್ಯ ಟ್ರಸ್ಟಿ ಪ್ರತಾಪ ಪರಾಶರ ಅವರ ಸಂಗಡಿಗರ ಸೇವೆ ಸ್ತುತ್ಯಾರ್ಹವಾದುದು ಎಂದು ಅಥಣಿಯ ಖ್ಯಾತ ಹಿರಿಯ ವೈದ್ಯರಾದ ಡಾ.ಎ.ಎ.ಪಾಂಗಿ ಹೇಳಿದರು.
ಅವರು ಪಟ್ಟಣದ ಭೋಜರಾಜ ದೇಸಾಯಿ ಕ್ರೀಡಾಂಗಣದಲ್ಲಿರುವ ಆರ್ ಎಚ್ ಕುಲಕರ್ಣಿ ಸಭಾಂಗಣದಲ್ಲಿ ಜರುಗಿದ ಸುಂದರ ಭಾರತ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ಸುವಿಧಾ ಪರಿವಾರ ಅಥಣಿ ಸಹಯೋಗದಲ್ಲಿ ಅಥಣಿ ತಾಲೂಕಿನ ಸರಕಾರಿ ಶಾಲೆ ವಿದ್ಯಾರ್ಥಿಗಳಿಗೆ ಉಚಿತ 27000 ನೋಟ್‌ಬುಕ್ ವಿತರಣಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಸುಂದರ ಭಾರತ ಮುಖ್ಯ ಟ್ರಸ್ಟಿ ಬೆಂಗಳೂರಿನ ಪ್ರತಾಪ ಪರಾಶರ ಮಾತನಾಡುತ್ತ ನಮ್ಮ ನಾಡಿನ ಯುವ ಜನತೆ ಶಿಕ್ಷಣ, ಉದ್ಯೋಗ ಹಾಗೂ ಕೌಶಲ್ಯದ ಮೂಲಕ ಪ್ರಗತಿ ಸಾಧಿಸಬೇಕು. ಪ್ರತಿಯೊಬ್ಬ ಯುವಕರು ಹಿಂಜರಿಕೆ ಮನೋಭಾವನೆ ತೊರೆದು ಸರಕಾರದ ವಿವಿಧ ಯೋಜನೆಗಳನ್ನು ಅರಿತುಕೊಂಡು ಸಬಲರಾಗಬೇಕು ಎಂಬ ಭಾವನೆಯಿಂದ ನಾವು ಶಿಕ್ಷಣ, ಉದ್ಯೋಗ ಹಾಗೂ ಕೌಶಲ್ಯ ಕುರಿತು ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದರು.
ಸುವಿಧಾ ಪರಿವಾರ ಅಥಣಿಯ ಸಂಸ್ಥಾಪಕ ಅಧ್ಯಕ್ಷ ಸತೀಶ್ ಕುಲಕರ್ಣಿ ಮಾತನಾಡಿ ಸುಂದರ ಭಾರತ ಟ್ರಸ್ಟ್ ನ ಸಮಾಜ ಸೇವೆ ಅಭಿನಂದನಾರ್ಹ. ಅಥಣಿ ತಾಲೂಕಿನ ಮೇಲಿರುವ ಪ್ರೀತಿಯಿಂದ ಅಥಣಿ ತಾಲೂಕಿನ ಹಲವಾರು ಸರ್ಕಾರಿ ಶಾಲೆಗಳಿಗೆ 27 ಸಾವಿರ ನೋಟ್ ಪುಸ್ತಕಗಳನ್ನು ನೀಡುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯ ಅವರ ಸೇವೆ ಹೀಗೆ ನಿರಂತರ ಸಾಗಲಿ ಎಂದರು.
ಅನಂತರ ಸಮೂಹ ಸಂಪನ್ಮೂಲ ವ್ಯಕ್ತಿ ಚನ್ನೇಶ ಅವರು ಸುಂದರ ಭಾರತ ಟ್ರಸ್ಟ್ ನ ಕಾರ್ಯ ವೈಖರಿ ಕುರಿತು ವಿವರಿಸಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಸುಂದರ ಭಾರತ ಟ್ರಸ್ಟ್ ಸದಸ್ಯ ಪ್ರಸನ್ನ, ಸುರೇಂದ್ರ ಉಪಸ್ಥಿತರಿದ್ದರು, ರಾಜಶೇಖರ ಟೋಪಗಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸುವಿಧಾ ಪರಿವಾರದ ಸದಸ್ಯರಾದ ರಾಜಕುಮಾರ ಅಡಹಳ್ಳಿ, ದೇವೇಂದ್ರ ಬಿಸ್ವಾಗರ್, ಡಾ ಆರ್ ಎಸ್ ದೊಡ್ಡನಿಂಗಪ್ಪಗೋಳ, ಪ್ರಶಾಂತ ತೊಡಕರ, ಸಂತೋಷ ಬಡಕಂಬಿ, ದೀಪಕ ಬುರ್ಲಿ, ಶಶಿಧರ ಬರ್ಲಿ, ಎಲ್ ವಿ ತೇರದಾಳ, ವಿಶ್ವನಾಥ ಕಂಬಾಗಿ ಸೇರಿದಂತೆ ವಿವಿಧ ಶಾಲೆಯ ಮುಖ್ಯೋಪಾಧ್ಯಾಯರು ವಿದ್ಯಾರ್ಥಿಗಳು ಅಥಣಿಯ ನಾಗರಿಕರು ಉಪಸ್ಥಿತರಿದ್ದರು.
ವರದಿ ಲಕ್ಕಪ್ಪ ನಾಯ್ಕ್
More Stories
ವಿದ್ಯಾರ್ಥಿಗಳು ವೃಥಾ ಕಾಲಹರಣ ಮಾಡದೇ ಸಮಯಕ್ಕೆ ಮಹತ್ವ ನೀಡಿ; ಸತ್ಯನಾರಾಯಣಪ್ಪ ಹರಪನಹಳ್ಳಿ
ಮುದ್ದೇಬಿಹಾಳದಲ್ಲಿ ಪತ್ರಿಕಾ ದಿನಾಚರಣೆ : ಪತ್ರಕರ್ತರಿಗೆ ಸೌಲಭ್ಯ ಒದಗಿಸಲು ಸರ್ಕಾರದ ಮೀನಮೇಷ-ಬಂಗ್ಲೆ ಮಲ್ಲಿಕಾರ್ಜುನ.
ಹಿಂದುತ್ವದ ಮಹತ್ವ ತಿಳಿಸುವ ಕಾರ್ಯ ಸ್ಲಾಗನಿಯ ;ಶ್ರೀಧರ ಮುರಡಿ ಹಿರೇಮಠದ ಶ್ರೀಗಳು