December 22, 2024

ಬೈಕ್ ಅಪಘಾತ;ಒರ್ವ ಬಾಲಕ ಸೇರಿ ಮಹಿಳೆ ಸಾವು

 

 

ಕುಷ್ಟಗಿ ಜು ೧೪.

ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಕಡೆಕೊಪ್ಪ ಗ್ರಾಮದ ಹತ್ತಿರದ ಬ್ರೀಜ್ ಮೇಲೆ ಬೈಕ್ ಅಪಘಾತದಲ್ಲಿ ಓರ್ವ ಬಾಲಕ ಸೇರಿ ಓರ್ವ ಮಹಿಳೆ ಸಾವಿಗೀಡಾದ ಘಟನೆ ಇಲಕಲ್ಲ – ಕುಷ್ಟಗಿ ಮಾರ್ಗದಲ್ಲಿ ಇಂದು ಮದ್ಯಾನಃ  ನಡೆದಿದೆ.

ಮೃತರನ್ನು ರುಕ್ಮಿಣಿ ರಂಜಿತಸಿಂಗ್(,೪೨ ) ವಿಜಯ( ೧೨)

ಎಂದು ಗುರುತಿಸಲಾಗಿದೆ. ಇವರು ಕಡೆಕೊಪ್ಪ ತಾಂಡಾದವರು ಎನ್ನಲಾಗಿದ್ದು.

 

ಅನಾಮೇದೆಯ ವಾಹನ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಈ ಘಟನೆ ಸಂಭವಿಸಿದೆ.ಈ ಕುರಿತು ಕುಷ್ಟಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಸ್ಥಳಕ್ಕೆ ಎಸ್ಪಿ ಬೇಟಿ.: ಈ ಅಪಘಾತ ಸಂಭವಿಸಿದ ಘಟನಾ ಸ್ಥಳಕ್ಕೆ ಕೊಪ್ಪಳ ನೂತನ ಪೊಲೀಸ್ ವರಿಷ್ಟಾಧಿಕಾರಿ ಡಾರಾಮ್ ಅರಸಿದ್ದಿ ಬೇಟಿ ನೀಡಿ ಪರಿಶೀಲನೆ ಮಾಡಿದರು. ಅವರ ಜೋತೆಗೆ ಕೊಪ್ಪಳ ಡಿವೈಎಸ್ಪಿ, ಸಿದ್ದಲಿಂಗಪ್ಪ, ಕುಷ್ಟಗಿ ಸಿಪಿಐ ಯಶವಂತ ಬಿಸನಳ್ಳಿ, ಪಿಎಸೈ ಮುದ್ದುರಂಗಸ್ವಾಮಿ, ಉಪಸ್ಥಿತರಿದ್ದರು.

ನಂತರ ಸುದ್ದಿಗಾರರಿಗೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ ರಾಮ್ ಅರಸಿದ್ದಿ ಮಾತನಾಡಿ ಜಿಲ್ಲೆಯಲ್ಲಿ ಯಾವುದೇ ಜೂಜು,ಮಟಕಾ, ಸೇರಿದಂತೆ ಕಾನೂನು ಬಾಹಿರ ಪ್ರಕರಣಗಳು ಕಂಡುಬಂದರೆ ಕೂಡಲೇ ಕ್ರಮ ಕೈಗೊಳ್ಳಲು ಪೋಲಿಸ್ ರು ಸನ್ನದ್ದರಾಗಿದ್ದರೆ, ಇನ್ನೂ ಮುಂದೆ ರಾತ್ರಿ ಹತ್ತು ವರೆ ಗಂಟೆಯ ಓಳಗೆ ಬಾರ್ ಗಳನ್ನು ಬಂದ್ ಮಾಡಿಸುವ ಮುಖಾಂತರ ಕಾನೂನು ಸುವ್ಯವಸ್ಥೆ ಹದಿಗೆಡದಂತೆ ಕ್ರಮ ಕೈಗೊಳ್ಳಲು ಇಲ್ಲಿನ ಪೋಲಿಸ್ ರಿಗೆ ತಿಳಿಸಿದರು.

 

ವರದಿ; ಶರಣಪ್ಪ ಲೈನದ್ ಹೀರೆಮನ್ನಾಪುರ

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!