ಕೊಪ್ಪಳ
ಕಾನೂನು ಅರಿವು ನಿತ್ಯ ಜೀವನದಲ್ಲಿ ಪ್ರಯೋಜನಕಾರಿ ಎಂದು ಗೌರವಾನ್ವಿತ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಸಿ ಹೇಳಿದರು.
ಕೊಪ್ಪಳ ನಗರದ ಶ್ರೀ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಕಾನೂನು ಮಹಾವಿದ್ಯಾಲಯದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾನೂನು ಅರಿವು ನಿತ್ಯ ಜೀವನದಲ್ಲಿ ಪ್ರಯೋಜನಕಾರಿ.
ಕಾನೂನು ರಚನೆ ಎಷ್ಟು ಮುಖ್ಯವೋ, ಅದರ ಅರಿವು ಮೂಡಿಸಿಕೊಳ್ಳುವುದು ಅಷ್ಟೇ ಮುಖ್ಯ, ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಜೊತೆಗೆ ಕಾನೂನಿನ ಬಗ್ಗೆ ತಿಳಿಯಬೇಕು, ನಮ್ಮ ದೇಶದಲ್ಲಿ ಮನುಷ್ಯನ ಹುಟ್ಟಿನಿಂದ ಸಾವಿನ ವರೆಗೂ ಸಾವಿರಾರು ಕಾನೂನುಗಳಿವೆ, ಇಂತಹ ಕಾನೂನಿಂದ ಶಾಂತಿ ನೆಮ್ಮದಿಯಿಂದ ದೇಶದಲ್ಲಿ ಬದುಕುವ ಅವಕಾಶ ಮಾಡಿಕೊಡಲಾಗಿದೆ,ಕಾನೂನಿನ ಬಗ್ಗೆ ಮಾಹಿತಿ ನೀಡಲು ನ್ಯಾಯಾಧೀಶರು ಹಾಗೂ ವಕೀಲರು ಇರುತ್ತಾರೆ, ತಪ್ಪು ಮಾಡಿದವರಿಗೆ ಕಾನೂನಿನಲ್ಲಿ ಕ್ಷಮೆ ಇರುವುದಿಲ್ಲ, ಆದ್ದರಿಂದ ದೇಶದ ಪ್ರತಿಯೋಬ್ಬ ನಾಗರಿಕರು ಕಾನೂನಿನ ಬಗ್ಗೆ ತಿಳಿಯುವುದು ಅಗತ್ಯ ಎಂದು ಹೇಳಿದರು.ಜೊತೆಗೆ ಬದಲಾವಣೆ ಮಾಡಲಾದ ಐಪಿಸಿ ಕಲಂಗಗಳ ಬಗ್ಗೆ ಪ್ರಾಧ್ಯಾಪಕರಿಂದ ಮಾಹಿತಿ ಪಡೆದುಕೊಳ್ಳಿ ಮತ್ತು
ಜೀವನದಲ್ಲಿ ತಮಗೆ ಅರಿವಿಲ್ಲದೆ ಮಾಡುವ ತಪ್ಪುಗಳು ಮುಂದೊಂದು ದಿನ ಶಿಕ್ಷಾರ್ಹ ಅಪರಾಧವಾಗುತ್ತದೆ, ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉನ್ನತ ಹುದ್ದೆಗೆ ತೆರಳುವಾಗ ಅವರ ಹಿನ್ನಲೆ ಪರಿಶೀಲಿಸಲಾಗುವುದು ಇಲ್ಲದೆ ಇದ್ದಲ್ಲಿ ಅವರ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ., ವಿದ್ಯಾರ್ಥಿಗಳು ಯಾವುದೇ ರೀತಿಯ ತಪ್ಪುಗಳನ್ನು ಮಾಡದೆ ಕಾನೂನು ಅಡಿಯಲ್ಲಿ ಕೆಲಸವನ್ನು ಮಾಡಬೇಕು, ಕಾನೂನು ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಉತ್ತಮ ರೀತಿಯ ಶಿಕ್ಷಣ ಪಡೆಯಲು ಎಲ್ಲಾ ಸೌಲಭ್ಯಗಳನ್ನು ನೀಡಿದೆ ಪ್ರತಿಯೊಬ್ಬ ವಿದ್ಯಾರ್ಥಿಗಳು ಕೂಡ ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಗೌರವಾನ್ವಿತ ಶ್ರೀ ಮಲಕಾರಿ ರಾಮಪ್ಪ ಒಡೆಯರ್ ಹಿರಿಯ ಸಿವಿಲ್ ನ್ಯಾಯಾಧೀಶರು ಮಾತನಾಡಿ ಸಮಾಜಕ್ಕೆ ಕಾನೂನಿನ ಅವಶ್ಯಕತೆ ಇದೆ. ಹತ್ತು ವರ್ಷಗಳ ಹಿಂದಿದ್ದ ಪರಿಸ್ಥಿತಿ ಈಗಿಲ್ಲ. ಬದಲಾದ ಇಂದಿನ ದಿನಗಳಲ್ಲಿ ಪ್ರಜೆಗಳೂ ಕಾನೂನುಗಳ ಬಗ್ಗೆ ಅರಿವು ಹೊಂದಬೇಕಾದ ಅವಶ್ಯಕತೆ ಇದೆ. ವಿದ್ಯಾರ್ಥಿಗಳೂ ಕಾನೂನುಗಳ ಕುರಿತು ಜ್ಞಾನ ಹೊಂದಬೇಕು. ವಿದ್ಯಾರ್ಥಿ ದೆಸೆಯಲ್ಲಿಯೇ ಕಾನೂನುಗಳ ಅರಿವು ಉಂಟಾದರೆ ನಂತರ ಪ್ರಬುದ್ಧ ವಯಸ್ಸಿಗೆ ಬಂದ ನಂತರ ಅವರು ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿ ಸಮಾಜವನ್ನು ಸುಧಾರಿಸಲು ಮತ್ತು ಉತ್ತಮ ಸಮಾಜವನ್ನು ಕಟ್ಟಲು ಅನುಕೂಲವಾಗುತ್ತದೆ ಮತ್ತು ನಾವು ಗ್ರಾಮೀಣ ಭಾಗದವರು ನಮಗೆ ಇಂಗ್ಲಿಷ್ ಬರುವುದಿಲ್ಲ ಎಂದು ಬೇಸರ ಪಡುವ ಅವಶ್ಯಕತೆ ಇಲ್ಲ ಕಲಿಕೆ ನಿಮ್ಮದಾಗಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಈರೇಶ್ ಬಿ ಅಂಚಟಗೇರಿ ಕಾರ್ಯಕಾರಿ ಅಧ್ಯಕ್ಷರು ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಕರ್ನಾಟಕ ಮಾತನಾಡಿ ನಮ್ಮ ಕಾನೂನು ಕಾಲೇಜಿನ ವಿದ್ಯಾರ್ಥಿಗಳಿಗೆ ಉತ್ತಮ ರೀತಿಯ ಶಿಕ್ಷಣ ನೀಡಲು ಪ್ರಯತ್ನಿಸುತ್ತೇವೆ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡುವುದೇ ನಮ್ಮ ಕಾಲೇಜಿನ ವಿಶೇಷತೆಯಾಗಿದೆ ಬೆಂಗಳೂರು ಧಾರವಾಡಗಳಿಗೆ ಹೋಗುವ ಅಗತ್ಯವಿಲ್ಲ ಇಲ್ಲಿಯೇ ಶಿಕ್ಷಣ ಪಡಿಯಬಹುದು ನಮ್ಮ ಆಡಳಿತ ಮಂಡಳಿ ಉತ್ತಮ ರೀತಿಯ ಕಾರ್ಯ ಮಾಡುತ್ತಿದೆ ಎಂದರು. ಈ ಕಾರ್ಯಕ್ರಮದ ಸ್ವಾಗತ ಭಾಷಣವನ್ನು ಶ್ರೀ ಉಷಾದೇವಿ ಹಿರೇಮಠ್ ಪ್ರಾಚಾರ್ಯರು ನಡೆಸಿದರು, ಅತಿಥಿ ಪರಿಚಯವನ್ನು ಮೋಹನ್ ಬಡಿಗೇರ್, ಸವಿತಾ, ನಿರೂಪಣೆಯನ್ನು ರಕ್ಷಿತಾ ಮತ್ತು ಚೆನ್ನಬಸವ, ವಂದನೆಯನ್ನು ಭರತ್ ಕುಮಾರ್ ಗೈದರು.
ಈ ಕಾರ್ಯಕ್ರಮದಲ್ಲಿ ಶ್ರೀ ರಾಘವೇಂದ್ರ ತವನಪ್ಪನವರ ಹಿಂದಿ ಪ್ರಚಾರ ಸಭಾಧ್ಯಕ್ಷರು ಧಾರವಾಡ, ಶ್ರೀ ಬಸವರಾಜ್ ವಸ್ತ್ರದ್, ಶ್ರೀ ಜಗದೀಶ್ ಎಂ ಮಲಗಿ, ಶ್ರೀ ಎಸ್ ರಾಧಾಕೃಷ್ಣನ್ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಕಾರ್ಯದರ್ಶಿಗಳು ಕಾಲೇಜಿನ ಉಪ ಪ್ರಾಚಾರ್ಯರು ಬಸವರಾಜ್ ಎಸ್ಎಂ, ಕಾಲೇಜಿನ ಪ್ರಾಧ್ಯಾಪಕರು, ಆಡಳಿತ ಮಂಡಳಿ, ಸಿಬ್ಬಂದಿ ವರ್ಗದವರು, ಕಾರ್ಯಕ್ರಮದ ಕೇಂದ್ರ ಬಿಂದುಗಳಾದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
More Stories
ವಿದ್ಯಾರ್ಥಿಗಳು ವೃಥಾ ಕಾಲಹರಣ ಮಾಡದೇ ಸಮಯಕ್ಕೆ ಮಹತ್ವ ನೀಡಿ; ಸತ್ಯನಾರಾಯಣಪ್ಪ ಹರಪನಹಳ್ಳಿ
ಮುದ್ದೇಬಿಹಾಳದಲ್ಲಿ ಪತ್ರಿಕಾ ದಿನಾಚರಣೆ : ಪತ್ರಕರ್ತರಿಗೆ ಸೌಲಭ್ಯ ಒದಗಿಸಲು ಸರ್ಕಾರದ ಮೀನಮೇಷ-ಬಂಗ್ಲೆ ಮಲ್ಲಿಕಾರ್ಜುನ.
ಹಿಂದುತ್ವದ ಮಹತ್ವ ತಿಳಿಸುವ ಕಾರ್ಯ ಸ್ಲಾಗನಿಯ ;ಶ್ರೀಧರ ಮುರಡಿ ಹಿರೇಮಠದ ಶ್ರೀಗಳು