December 22, 2024

ಮನುಷ್ಯ ಸಮಾಜದ ಋಣ ತೀರಿಸಬೇಕು : ಸಂತೋಷ ಬಡಕಂಬಿ

ಅಥಣಿ : ಸಮಾಜಕ್ಕೆ ಸಹಾಯ ಮಾಡಬೇಕೆಂದು ಬಯಸುವ ಜನತೆ ಇಂದು ಬಹಳ ಕಡಿಮೆ ಆದರೆ ಅಥಣಿ ತಾಲೂಕಿನ ಸರಕಾರಿ ಶಾಲೆಯ ಮಕ್ಕಳಿಗೆ ಸುಮಾರು 27000 ನೋಟ್ ಬುಕ್ ಗಳನ್ನು ಉಚಿತವಾಗಿ ವಿತರಣೆ ಮಾಡುತ್ತಿರುವ ಸುಂದರ ಭಾರತ ಟ್ರಸ್ಟ ಸೇವೆ ಶ್ಲಾಘನೀಯವಾದದ್ದು ಎಂದು ಅಥಣಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸಂತೋಷ ಬಡಕಂಬಿ ಅವರು ಹೇಳಿದರು.

ಅವರು ಅಥಣಿ ಗ್ರಾಮೀಣ ಭಾಗದ ಬಡಕಂಬಿ ತೋಟದ ಸರಕಾರಿ ಶಾಲೆಯಲ್ಲಿ ಎಲ್ಲ ಮಕ್ಕಳಿಗೆ ಸುಂದರ ಭಾರತ ಟ್ರಸ್ಟ್ ವತಿಯಿಂದ ಸುವಿಧಾ ಪರಿವಾರ ಸಹಯೋಗದಲ್ಲಿ ಉಚಿತ ನೋಟಬುಕ್ ವಿತರಿಸಿ ಮಾತನಾಡಿ ಯಾವುದೇ ಫಲಾಪೇಕ್ಷೆ ಇಲ್ಲದೆ ಮುಕ್ತ ಮನಸ್ಸಿನಿಂದ ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡುತ್ತಿರುವ ಪ್ರತಾಪ ಪರಾಶರ ಹಾಗೂ ಅವರ ತಂಡ ನಿಜಕ್ಕೂ  ಅಭಿನಂದನಾರ್ಹರು ಎಂದು ಹೇಳಿದರು.

ಅನಂತರ ಗ್ರಾಮ ಪಂಚಾಯತ ಸದಸ್ಯ ಪರಶುರಾಮ ಸೋನಕರ ಅವರು ಮಾತನಾಡಿ ಉಚಿತವಾಗಿ ಕೊಟ್ಟ ಪುಸ್ತಕಗಳನ್ನು ಎಲ್ಲ ಮಕ್ಕಳು ಸದುಪಯೋಗ ಪಡಿಸಿಕೊಂಡು ಮುಂದೆ ನೀವೂ ಕೂಡ ಕಲಿಕೆಗೆ ಪ್ರೋತ್ಸಾಹ ನೀಡುವ ಕಾಯಕದಲ್ಲಿ ಭಾಗಿಯಾಗಿ ಎಂದರು.

ಕಾರ್ಯಕ್ರಮದಲ್ಲಿ  ಎಸ್ ಡಿ ಎಂ ಸಿ ಅಧ್ಯಕ್ಷ ಶಿವಾನಂದ ಚಮಕೇರಿ, ಮುಖಂಡರಾದ ರಮೇಶ ಕಾಗಲೆ, ಪ್ರಭಾಕರ ಚಮಕೇರಿ, ಲಕ್ಷ್ಮಣ ಬಡಕಂಬಿ, ಮುರುಗೇಶ ಮೋಳೆ, ಎ ಎಸ್ ಪೂಜಾರಿ, ಕೋಳಿ ಸರ್ ಸೇರಿದಂತೆ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವರದಿ ಲಕ್ಕಪ್ಪ ನಾಯ್ಕ್

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!