December 22, 2024

ಹಿಂದೂ ಮುಸ್ಲಿಂ ಭಾವೈಕ್ಯತೆ ಮೇರೆದ ಇಟಗಿಯ ಮೊಹರಂ ಆಚರಣೆ

 

ಕುಕನೂರ .

ತಾಲೂಕಿನ ಇಟಗಿ ಗ್ರಾಮದಲ್ಲಿ ಜಗತ್ ವಿಖ್ಯಾತ ಶ್ರೀ ಮಹೇಶ್ವರ ದೇವಸ್ಥಾನ ವಿದೆ, ಮುಸ್ಲಿಮರ ಪವಿತ್ರ ಮಸೀದಿ ಹಾಗೂ ದರ್ಗಾ ಕೂಡ ಇವೆ ಮೊಹರಂ ತಿಂಗಳ 10ನೇ ದಿನ ನಿಮಿತ್ಯ ನಡೆಯುವ ಈ ಹಬ್ಬದಲ್ಲಿ ಹತ್ತು ದಿನಗಳವರೆಗೂ ಹಿಂದೂ-ಮುಸ್ಲಿಮರು ಭೇದ ಭಾವ ಇಲ್ಲದೆ ಮೊಹರಂ ಆಚರಣೆಯಲ್ಲಿ ದೇವರ ಸವಾರಿಗಳು ಡೋಲಿ ಹೋರುವ ಕಾರ್ಯದಲ್ಲಿ ಭಾಗವಹಿಸುತ್ತಾರೆ ಇದಕ್ಕೆ ತಾಜಾ ಉದಾಹರಣೆಯಂತೆ ಇಟಗಿ ಗ್ರಾಮದಲ್ಲಿ ಇಂದು ನಡೆದ ಮೊಹರಂ ಆಚರಣೆಯಲ್ಲಿ ಹಿಂದೂ ಮುಸ್ಲಿಂ ಭಕ್ತರು ತಮ್ಮ ಮನಸ್ಸಿನ ಕೋರಿಕೆ ಈಡೇರಿಕೆಗಾಗಿ ಸಕ್ಕರೆ ಹೋಯಿಸುವುದು, ದವಸ ಧಾನ್ಯಗಳನ್ನು ದಾನ ಮಾಡುತ್ತಾರೆ, ಕಳ್ಳಳ್ಳಿ ವೇಷ ಫಕೀರ್ ರಾಗಿ ಹಾಗೂ ವಿಶೇಷ ದೀರ್ಘ ದಂಡ ನಮಸ್ಕಾರಗಳನ್ನು ದೇವರಿಗೆ ಸಲ್ಲಿಸುತ್ತಾರೆ.

ಇಟಗಿ ಗ್ರಾಮದ ಕಿಲ್ಲೆದ್ ಮಸೂತಿ ಸರ್ಕಾರಿ ಮಸೂತಿ, ಎಲಿಗಾರ ಮಸೂತಿ, ಪಿಂಜಾರ ಮಸೂತಿ ಯ ದೇವರ ಗಳನ್ನು ನೋಡಲು ಇಟಗಿಯ ಭಕ್ತರು, ದೇವರ ಮೆರವಣಿಗೆಯಲ್ಲಿ, ಭಾಗವಹಿಸಿ ಸಕ್ಕೆರೆ ಹೊಯಿಸಿ ಪುನೀತರಾದರು.

ವರದಿ ಲಕ್ಷ್ಮಣ ಕೆರಳ್ಳಿ ಇಟಗಿ

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!