ಮಳೆಯಲ್ಲಿಯೇ ಕುರಿಗಾಳಿಗಳ ಮನೆಯಂಗಳಕ್ಕೆ ಭೇಟಿ ಮಾಡಿ, ಸಮಸ್ಯೆಗಳನ್ನು ಆಲಿಸಿದರು.
ಕುಕನೂರ:
ತಾಲೂಕಿನ ಮಂಗಳೂರು ಗ್ರಾಮದಲ್ಲಿ ವಾಸವಿರುವ ಕುರಿಗಾಯಿಗಳ ಸ್ಥಳಕ್ಕೆ ಕೊಪ್ಪಳ ಜಿಲ್ಲಾ ಪಂಚಾಯತಿಯ ಸಿಇಒ ರಾಹುಲ್ ರತ್ನಂ ಪಾಂಡೆ ಭೇಟಿ.
ಗ್ರಾಮಗಳಲ್ಲಿ ಹಲವಾರು ಜನರು ಕೃಷಿ ಮತ್ತು ಕೃಷಿಯೇತರ ಕೆಲಸಗಳನ್ನು ಮಾಡಿ ಜೀವನ ನಿರ್ವಹಣೆ ಮಾಡುತ್ತಾರೆ, ಮುಖ್ಯವಾಗಿ ಕುರಿ ಕಾಯುವ ಕುರಿಗಾಯಿಗಳಿಗೆ ಸರ್ಕಾರ ಅನೇಕ ರೀತಿಯ ಸೌಲಭ್ಯವನ್ನು ನೀಡುತ್ತಿದೆ, ಅದರ ಸದುಪಯೋಗ ಪ್ರತಿಯೊಬ್ಬರು ಪಡೆದುಕೊಳ್ಳಿ ಎಂದರು.
ಸರಿಯಾದ ರೀತಿಯಲ್ಲಿ ಕುರಿಗಳನ್ನು ಆರೈಕೆ ಮಾಡಿ, ಕಾಲಕಾಲಕ್ಕೆ ವೈದ್ಯರಿಂದ ಸಲಹೆ ಮೇರೆಗೆ, ಔಷಧಿಯನ್ನು ನೀಡಿ, ರಾತ್ರಿಯ ಸಮಯದಲ್ಲಿ ಜಾಗರೂಕತೆಯಿಂದ ನೋಡಿಕೊಳ್ಳಬೇಕು, ಅದೇ ರೀತಿ ಕುರಿಗಾಯಿಗಳಾದ ತಾವೂ ಕೂಡ ಜೋಪಾನ ರೀತಿಯಿಂದ ಇರಿ, ಕುರಿ ಆಡುಗಳನ್ನು ಮಕ್ಕಳ ರೀತಿಯಲ್ಲಿ ಆರೈಕೆ ಮಾಡಿ ನಿಮಗೆ ಅವುಗಳು ಒಳ್ಳೆಯ ಲಾಭ ಕೊಡುತ್ತವೆ.
ಯಾವುದೇ ರೀತಿಯ ಸಮಸ್ಯೆಗಳು ಇದ್ದರೂ ನಮ್ಮ ಗಮನಕ್ಕೆ ತಂದಲ್ಲಿ ನಾವು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿ ತಮ್ಮ ಸಮಸ್ಯೆಗೆ ಬಗೆಹರಿಸುತ್ತೇವೆ, ಅಲ್ಲದೇ ಕುರಿಗಾಯಿಗಳು ಕುರಿ ಮತ್ತು ಉಣ್ಣೆ ಉತ್ಪಾದಕರ ನಿಗಮದ ಸಹಾಯಕ ನಿರ್ದೇಶಕರಿಗೂ ಸಹ ತಮ್ಮ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಬಹುದು ಎಂದರು.
ಕುರಿಗಾಯಿಗಳು ತಮ್ಮ ಸಂಘಕ್ಕೆ ಜಾಗದ ಅವಶ್ಯಕತೆ ಇದ್ದಲ್ಲಿ ತಮ್ಮ ಮನವಿಯನ್ನು ನೀಡಿದಲ್ಲಿ ಸೂಕ್ತವಾದ ಜಾಗವನ್ನು ನೀಡುವ ವ್ಯವಸ್ಥೆಯನ್ನು ಕೂಡ ಮಾಡುತ್ತೇವೆ. ತಮ್ಮ ಸಂಘದ ವತಿಯಿಂದ ನಮಗೆ ಮನವಿ ಸಲ್ಲಿಸಿ, ಸರ್ಕಾರದಿಂದ ಕುರಿಗಾಯಿಗಳಿಗೆ ಬರುವ ಸೌಲಭ್ಯವನ್ನು ಪ್ರತಿಯೊಬ್ಬರಿಗೂ ಕೂಡ ತಲುಪವಂತಾಗಬೇಕಾಗಿದೆ.
ಸಂಘದ ಪದಾಧಿಕಾರಿಗಳು ಎಲ್ಲರೂ ಸೇರಿಕೊಂಡು ಸಭೆಗಳನ್ನು ಮಾಡಿದ ಸಮಸ್ಯೆಗಳನ್ನು ಚರ್ಚಿಸಿ ಪರಿಹಾರ ಕೊಂಡುಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ಕುರಿ ಮತ್ತು ಉಣ್ಣೆ ಉತ್ಪಾದಕರ ನಿಗಮದ ಸಹಾಯಕ ನಿರ್ದೇಶಕರು ಕೊಪ್ಪಳ ಯಮನೂರಪ್ಪ, ಕುಕನೂರು ಇಓ ಸಂತೋಷ್ ಬಿರಾದರ್, ಕುಕನೂರು, ಮಂಗಳೂರು ಪಶು ಇಲಾಖೆ ಅಧಿಕಾರಿಗಳು, ಮಂಗಳೂರಿನ ಪಿಡಿಒ ನಿಲಂ ಚಳಗೇರಿ.
ಶ್ರೀ ಮುದುಕೇಶ್ವರ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು, ಮಂಗಳೂರಿನ ಕುರಿಗಾಯಿಗಳು, ಪಶು ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
More Stories
ವಿದ್ಯಾರ್ಥಿಗಳು ವೃಥಾ ಕಾಲಹರಣ ಮಾಡದೇ ಸಮಯಕ್ಕೆ ಮಹತ್ವ ನೀಡಿ; ಸತ್ಯನಾರಾಯಣಪ್ಪ ಹರಪನಹಳ್ಳಿ
ಮುದ್ದೇಬಿಹಾಳದಲ್ಲಿ ಪತ್ರಿಕಾ ದಿನಾಚರಣೆ : ಪತ್ರಕರ್ತರಿಗೆ ಸೌಲಭ್ಯ ಒದಗಿಸಲು ಸರ್ಕಾರದ ಮೀನಮೇಷ-ಬಂಗ್ಲೆ ಮಲ್ಲಿಕಾರ್ಜುನ.
ಹಿಂದುತ್ವದ ಮಹತ್ವ ತಿಳಿಸುವ ಕಾರ್ಯ ಸ್ಲಾಗನಿಯ ;ಶ್ರೀಧರ ಮುರಡಿ ಹಿರೇಮಠದ ಶ್ರೀಗಳು