December 22, 2024

ಕೃಷಿ ಮಾಡುವ ರೈತರಿಗೆ ಮೂಗಿಗೆ ತುಪ್ಪ ಸವರಿದ ಕ್ರೇಂದ್ರ ಬಜೆಟ್

ಕೊಪ್ಪಳ:

ನರೇಂದ್ರ ಮೋದಿಯವರ ನೇತೃತ್ವದ 3.0 ಎನ್ ಡಿ ಎ ಸರ್ಕಾರದ ಬಜೆಟ್ ಘೋಷಣೆಯಾಗಿದ್ದು ಬಜೆಟ್ ನಲ್ಲಿ ಕೃಷಿ ಕ್ಷೇತ್ರಕ್ಕೆ ಪ್ರಯೋಜನಗಳಿಲ್ಲ.ರೈತರ ಮುಖಕ್ಕೆ ಬೆಣ್ಣೆ ಸವರುವ ಬಜೆಟ್ ಯಾಗಿದೆ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಅಂದಪ್ಪ ಕೋಳೂರು ಹೇಳಿದರು.

ಕುಕನೂರು ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೇಂದ್ರ ಬಜೆಟ್ ನಲ್ಲಿ ಕೃಷಿ ಕ್ಷೇತ್ರಕ್ಕೆ ಅನುದಾನ ಹೆಚ್ಚಳ ಮಾಡಿದ್ದರು ರೈತರ ನೈಜ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಬಜೆಟ್ ಕಾರ್ಯಯೋಜನೆ ಇಲ್ಲ. ಸಾಲಮನ್ನಾಯೊಜನೆ ಇಲ್ಲ. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಖಾತ್ರಿ ಮಾಡುವ ಬಗ್ಗೆ ಪ್ರಸ್ತಾಪವಿಲ್ಲ. ಕೃಷಿ
ಕ್ಷೇತ್ರ ಶ್ರಮಿಕರ ಕ್ಷೇತ್ರವಾಗಿದೆ ಡಿಜಿಟಲ್ಲಿಕರಣ ಆಹಾರ ಉತ್ಪಾದನೆ ಮಾಡುವುದಿಲ್ಲ ಎಂಬುದನ್ನು ಕೇಂದ್ರ ಸರ್ಕಾರ ಮರೆತಿದೆ.
ರೈತರ ಜಮೀನು ಮೌಲ್ಯದ 75 ರಷ್ಟು ಸಾಲ ನೀಡುವ ನೀತಿ. ಜಾರಿಯಾಗಿಲ್ಲ.ಬೆಳೆವಿಮೆ ಬಗ್ಗೆ ಚರ್ಚೆ ಇಲ್ಲ ಕಿಸಾನ್ ಕ್ರೆಡಿಟ್ ಕಾರ್ಡ್ ರೈತರಿಗೆ ಉಪಯೋಗವಿಲ್ಲ. ಅತಿವೃಷ್ಟಿಯಿಂದ ಹಾಳಾದ ರೈತರಿಗೆ ಯಾವುದೇ ಬಜೆಟ್ ಇಲ್ಲ ಕರ್ನಾಟಕ ರಾಜ್ಯ ಸರ್ಕಾರದ ಕೃಷಿ ಮಾಡುವ ರೈತರನ್ನು ಅತ್ತಿಕೊ ಕೆಲಸ ಮಾಡಿದ ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ಕೃಷಿ ಕ್ಷೇತ್ರ ಅನ್ನುವ ಪದಕ್ಕೆ ಅನ್ಯಾಯ ಮಾಡಿದ ಕೇಂದ್ರ ಸರ್ಕಾರ
ಎಂದು ತಿಳಿಸಿದ್ದಾರೆ

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!