ಕೊಪ್ಪಳ : ನಗರದ ಗಾಂಧಿನಗರ ಕಾಲೋನಿಯ ಗ್ರಾಮ ದೇವತೆ ಗೊಂದಳಿ ಸಮಾಜದ ಆರಾಧ್ಯ ದೈವ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವ ಹಾಗೂ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ಸೋಮವಾರದಿಂದ ಶುಕ್ರವಾರ ವರೆಗೆ ಜರುಗಲಿದೆ.
ಈ ಕುರಿತು ದೇವಸ್ಥಾನ ಸಮಿತಿ ಪ್ರಮುಖರಾದ ಗಾಳೆಪ್ಪ ಎಚ್ ಪಂಚಂಗಿ ಹಾಗೂ ನಗರಸಭೆ ಮಾಜಿ ಸದಸ್ಯ ನಾಮದೇವ ಜಕ್ಕಲಿ ಪತ್ರಿಕೆಯವರೊಂದಿಗೆ ಮಾತನಾಡಿ, ಶ್ರೀ ದುರ್ಗಾದೇವಿ ಎಲ್ಲಾ ಧಮ೯ದವರ ಒಳಿತನ್ನು ಬಯಸುವ ಜಗನ್ಮಾತೆಯಾಗಿದ್ದಾಳೇ, ನಮ್ಮ ಪೂವಿ೯ಕರಿಂದ ವಿವಿಧ ರೀತಿಯ ಧಾರ್ಮಿಕ ಪೂಜಾ ವಿಧಿ, ವಿಧಾನಗಳನ್ನು ಆಚರಿಸುತ್ತಾ ಬಂದಿದ್ದೇವೆ. ಈ ಜಾತ್ರಾ ಮಹೋತ್ಸವ ಭಕ್ತಾದಿಗಳ ಪಾಲಿಗೆ ಹಬ್ಬದ ವಾತಾವರಣ ಸೃಷ್ಟಿಸಿದ್ದು, ಆ ತಾಯಿ ನಮ್ಮೆಲ್ಲ ಭಕ್ತ ಸಮೂಹಕ್ಕೆ ಒಳ್ಳೆಯದನ್ನು ಮಾಡುತ್ತಿದ್ದು ಇಲ್ಲಿಗೆ ಅಪಾರ ಸಂಖ್ಯೆಯ ಭಕ್ತಾಧಿಗಳು ಆಗಮಿಸಿ ತನು, ಮನದಿಂದ ಸೇವೆ ಸಲ್ಲಿಸಿ ದೇವಿಯ ಆಶಿರ್ವಾದ ಪಡೆಯುತ್ತಾರೆ ಎಂದರು.
ಮೊದಲು ಉದ್ಭವ ಮೂತಿ೯ ಯಾಗಿ ಈಗ ಜನಪ್ರತಿನಿಧಿಗಳ ಸಹಕಾರದಿಂದ ದೇವಸ್ಥಾನ ಕಟ್ಟಡ, ಸಮುದಾಯ ಭವನ ನಿರ್ಮಾಣ ವಾಗಿವೆ. ದೇವಿಯ ಕೃಪೆಯಿಂದ ಸಾಮೂಹಿಕ ಮದುವೆಗಳು ನಡೆಯುತ್ತವೆ. ಅಮ್ಮನು ನಂಬಿದ ಭಕ್ತರನ್ನು ಕೈಬಿಡುವುದಿಲ್ಲ. ಕರದಂಟು ಮಾರುವ ಮಹಿಳೆಯನ್ನು ಅಮೆರಿಕ ದಲ್ಲಿ ಉದ್ಯೋಗ ಮೂಲಕ ಬೆಳೆಸಿದ ಕೀರ್ತಿ ಈ ದೇವಸ್ಥಾನಕ್ಕಿದೆ ಎಂದು ತಿಳಿಸಿದರು.
More Stories
ವಿದ್ಯಾರ್ಥಿಗಳು ವೃಥಾ ಕಾಲಹರಣ ಮಾಡದೇ ಸಮಯಕ್ಕೆ ಮಹತ್ವ ನೀಡಿ; ಸತ್ಯನಾರಾಯಣಪ್ಪ ಹರಪನಹಳ್ಳಿ
ಮುದ್ದೇಬಿಹಾಳದಲ್ಲಿ ಪತ್ರಿಕಾ ದಿನಾಚರಣೆ : ಪತ್ರಕರ್ತರಿಗೆ ಸೌಲಭ್ಯ ಒದಗಿಸಲು ಸರ್ಕಾರದ ಮೀನಮೇಷ-ಬಂಗ್ಲೆ ಮಲ್ಲಿಕಾರ್ಜುನ.
ಹಿಂದುತ್ವದ ಮಹತ್ವ ತಿಳಿಸುವ ಕಾರ್ಯ ಸ್ಲಾಗನಿಯ ;ಶ್ರೀಧರ ಮುರಡಿ ಹಿರೇಮಠದ ಶ್ರೀಗಳು