December 22, 2024

ಮಕ್ಕಳಿಗೆ ಕರಕುಶಲ ಪ್ರಾಯೋಗಿಕ ತರಬೇತಿ ಕಾರ್ಯಕ್ರಮ.

ಕೊಪ್ಪಳ ಜುಲೈ 24 :-
ನಗರದ ಹೊರಹೊಲಯದಲ್ಲಿರುವ
ಮಿಲಿನಿಯಂ ಪಬ್ಲಿಕ್ ಶಾಲೆಯಲ್ಲಿ ಕರಕುಶಲಕರ್ಮಿಗಳು (CDAP )ತಂಡದ ವತಿಯಿಂದ ಮಕ್ಕಳಿಗೆ ಪ್ರಾಯೋಗಿಕ ತರಬೇತಿಯನ್ನು ನೀಡುವುದರ ಮೂಲಕ ಮಕ್ಕಳಲ್ಲಿ ನಿರುಪಯುಕ್ತ ವಸ್ತುಗಳ ಸದ್ಬಳಕೆ ಕುರಿತು ತಿಳಿಸಲಾಯಿತು.

ಈ ಕಾರ್ಯಕ್ರಮವು ಕರಕುಶಲ ಅಭಿವೃದ್ಧಿ ಆಯುಕ್ತರು ,ಜವಳಿ ಕರಕುಶಲ ಸಚಿವಾಲಯ ,ಭಾರತ ಸರ್ಕಾರ ಇವರ ವತಿಯಿಂದ ಮೂರು ದಿನಗಳ ಕಾಲ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಈ ಕಾರ್ಯಕ್ರಮದ ರೂವಾರಿಗಳಾದ
ಕರಕುಶಲ ಅಭಿವೃದ್ಧಿ ಸಹಾಯಕ ನಿರ್ದೇಶಕರು ಶ್ರೀಮತಿ ವೀಣಾ ರವರು ಮಾತನಾಡಿ ದೇಶದ ಮೂಲೆ ಮೂಲೆಯಲ್ಲೂ ನಮ್ಮ ಸಂಸ್ಕೃತಿಯ ಸಾಂಪ್ರದಾಯಿಕ ಕರಕುಶಲ ವಸ್ತುಗಳ ತಯಾರಿಕೆ ಮತ್ತು ಅವುಗಳ ಉಪಯೋಗದ ಬಗ್ಗೆ ತಿಳಿಸಿ ಹೇಳಿದರು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಾಲೆಯ ಅಧ್ಯಕ್ಷರಾದ ಶ್ರೀ ಗಿರೀಶ್ ಕಣವಿ ಮತ್ತು ಕಾರ್ಯದರ್ಶಿಗಳಾದ ಶ್ರೀಮತಿ ಗೀತಾ ಕಣವಿಯವರು ಪಠ್ಯದ ಜೊತೆಗೆ ಸಹಪಠ್ಯ ಚಟುವಟಿಗಳನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳು ಕಸದಿಂದ ರಸ ಎಂಬ ಮಾತಿನಂತೆ ಕರಕುಶಲ ವಸ್ತುಗಳನ್ನು ತಯಾರಿಸುವ ವಿಧಾನವನ್ನು ತಿಳಿಯಬೇಕೆಂದು ತಿಳಿಸಿದರು. ಅದೇ ರೀತಿಯಾಗಿ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸಪ್ನ ತೋಟದ್ ರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ದೇಶಿಯ ಸಾಂಪ್ರದಾಯಿಕ ಕರಕುಶಲ ವಸ್ತುಗಳನ್ನು ಖರೀದಿಸಿ ಎಂದು ತಿಳಿಸಿದರು.

ಹೀಗೆ ಈ ಕಾರ್ಯ ಚಟುವಟಿಕೆಯಲ್ಲಿ ಮಕ್ಕಳು ತುಂಬ ಉತ್ಸುಕತೆಯಿಂದ ಪಾಲ್ಗೊಂಡು ತ್ಯಾಜ್ಯ ವಸ್ತುಗಳ ಬಳಕೆಯನ್ನು ತಿಳಿಯುವುದು ಮಾತ್ರವಲ್ಲದೆ ಅವುಗಳ ತಯಾರಿಕೆ ಬಗ್ಗೆ ತಿಳಿದುಕೊಂಡರು. ಕಾರ್ಯಕ್ರಮದಲ್ಲಿ ಶಾಲೆಯ ಸಹ ಶಿಕ್ಷಕ ವರ್ಗದವರು ಪಾಲ್ಗೊಂಡಿದ್ದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!