December 23, 2024

ಅಮರೇಗೌಡ ಬಯ್ಯಾಪುರ ಸರ್ವ ಜನಾಂಗದ ನಾಯಕ; ಚಂದ್ರಶೇಖರ್ ನಾಲತ್ವಾಡ

ಕೊಪ್ಪಳ.

ಲೋಕಸಭಾ ಚುನಾವಣೆಯ ಸಂಧರ್ಬದಲ್ಲಿ ಶಾಸಕ ದೊಡ್ಡನಗೌಡ ಪಾಟೀಲ್ ಅವರು ಮಾಜಿ ಸಚಿವ ಅಮರೇಗೌಡ ಬಯ್ಯಾಪೂರ ಅವರನ್ನು ಲಿಂಗಾಯತ ನಾಯಕರಿಗೆ ಮೂಲೆಗುಂಪು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು ಆದರೆ ಮಾಜಿ ಸಚಿವ ಅಮರೇಗೌಡ ಬಯ್ಯಾಪೂರರವರು ಸರ್ವಜನಾಂಗದ ನಾಯಕರಾಗಿದ್ದು ಯಾವುದೇ ಜಾತಿಗೆ ಅಂಟಿಕೊಂಡಿಲ್ಲ ಎಂದು ಕುಷ್ಟಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ನಾಲತ್ವಾಡ ಹೇಳಿದರು.

 

ಕೊಪ್ಪಳ ಜಿಲ್ಲೆ ಕುಷ್ಟಗಿ ಪಟ್ಟಣದ  ಪ್ರವಾಸಿ ಮಂದಿರದಲ್ಲಿ ಕಾಂಗ್ರೆಸ್ ಬ್ಲಾಕ್ ಕಮೀಟಿಯ ಅಧ್ಯಕ್ಷ ಚಂದ್ರಶೇಖರ ನಾಲತ್ವಾಡ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ಕಳೆದ ವಿಧಾನ ಸಭಾ ಚುನಾವಣೆ ಸೇರಿದಂತೆ ಇತ್ತಿಚೀನ ಲೋಕಸಭಾ ಚುನಾವಣೆಯಲ್ಲಿ ಕೊಪ್ಪಳ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಮಾಜಿ ಸಚಿವರಾದ ಅಮರೇಗೌಡ ಬಯ್ಯಾಪೂರ ಅವರು ಪಕ್ಷದ ಪರವಾಗಿ ಕಾಲಿಗೆ ಚಕ್ರ ಕಟ್ಟಿಕೊಂಡು ಪ್ರಚಾರ ಮಾಡಿದ್ದು ಅವರೊಬ್ಬ ಒಂದೇ ಕಮ್ಯುನಿಟಿ ಸೇರಿದ ನಾಯಕರಲ್ಲಾ ಸರ್ವ ಜನಾಂಗದ ಹಿತದೃಷ್ಟಿಯಿಂದ ಕೆಲಸಮಾಡಿದ ರಾಜ್ಯ ಮಟ್ಟದ ನಾಯಕರಾಗಿದ್ದಾರೆ.

ಇಂತಹ ವ್ಯಕ್ತಿ ಬಗ್ಗೆ ಹಗುರವಾಗಿ ಮಾತನಾಡಿದ ಶಾಸಕ ದೊಡ್ಡನಗೌಡ ಪಾಟೀಲ್ ಅವರು ಈ ಲೋಕಸಭಾ ಚುನಾವಣೆಯಲ್ಲಿ ಎಷ್ಟರಮಟ್ಟಿಗೆ ಪಕ್ಷದ ಪರ ಕೆಲಸ ಮಾಡಿದ್ದಾರೆ ಎಂಬುದು ಜನರಿಗೆ ತಿಳಿದಿದೆ.

ಅದಕ್ಕೆ ತಾಜಾ ಉದಾಹರಣೆ ಶಾಸಕ ದೊಡ್ಡನಗೌಡ ಪಾಟೀಲ್ ಅವರ ಸ್ವ ಗ್ರಾಮ ಕೋರಡಕೇರಾ ದಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ ಇದರಲ್ಲಿ ತಿಳಿಯುತ್ತದೆ ಯಾರೂ ಜಾತಿ ರಾಜಕಾರಣ ಮಾಡುತ್ತಾರೆ ಎಂಬುದು ಜಿಲ್ಲೆಗೆ ಗೊತ್ತಿದೆ ಎಂದು ಹೇಳಿದರು.

ನಂತರ ರಾಜ್ಯ ಕಾಂಗ್ರೆಸ್ ಮಾಧ್ಯಮ ವಕ್ತಾರ ಲಾಡ್ಲೆ ಮಷಾಕ್ ಮಾತನಾಡಿ ಶಾಸಕರಾಗಿ ದೊಡ್ಡನಗೌಡ ಪಾಟೀಲ್ ಅವರು ಕ್ಷೇತ್ರದ ಅಭಿವೃದ್ಧಿಗೆ ಪ್ರಯತ್ನ ಮಾಡದೆ ಕಾಲಹರಣ ಮಾಡುತ್ತಿದ್ದಾರೆ,ಮಾಜಿ ಸಚಿವ ಅಮರೇಗೌಡ ಬಯ್ಯಾಪೂರ ಅವರು ಕುಷ್ಟಗಿ ವಿಧಾನ ಸಭಾ ಕ್ಷೇತ್ರದ ಅಭಿವೃದ್ಧಿಗೆ ತಮ್ಮ ಅವಧಿಯಲ್ಲಿ ಸಾಕಷ್ಟು ಕೆಲಸ ಮಾಡಿದರು ಕೂಡಾ ಮತದಾರ ನೀಡಿದ ತೀರ್ಪಿಗೆ ತಲೆಬಾಗಿ ಪಕ್ಷದ ಸಂಘಟನೆಯ ಜವಾಬ್ದಾರಿ ಪಡೆದು ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾರೆ.ಅವರಿಗೆ ಯಾವುದೇ ಜಾತಿ ಬಗ್ಗೆ ಅಗೌರವ ಸ್ವಜಾತಿ ಪ್ರೇಮವಿಲ್ಲಾ ಅವರೊಬ್ಬ ಸರ್ವಜನಾಂಗದ ಅಭಿವೃದ್ಧಿ ಬಯಸುವ ಜನಮೆಚ್ಚಿದ ಅಭಿವೃದ್ಧಿ ಹರಿಕಾರರಾಗಿದ್ದಾರೆ ಎಂದರು.

 

 

ಪುರಸಭೆಯ ಸದಸ್ಯ ವಸಂತ ಮೇಲಿನಮನಿ ಮಾತನಾಡಿ ಶಾಸಕರಾಗಿ ದೊಡ್ಡನಗೌಡ ಪಾಟೀಲ್ ಅವರು ವರ್ಷ ಕಳೆದರು ಕೂಡಾ ಇನ್ನೂ ಅವರಿಂದ ಕ್ಷೇತ್ರದಲ್ಲಿ ಹೇಳಿಕೊಳ್ಳುವಂತಹ ಕೆಲಸ ನಡೆದಿಲ್ಲ ಅವರೇ ಓದಿದ ಕಾಲೇಜು ಕಟ್ಟಡ ಕುಷ್ಟಗಿ ಯಲ್ಲಿ ಕುಸಿಯುವ ಹಂತಕ್ಕೆ ಹೋಗಿದೆ ಕಾರಣ ಶಿಕ್ಷಣದ ಮಹತ್ವ ಅರಿತು ಕಾಲೇಜು ಕಟ್ಟಡ ಸೇರಿದಂತೆ ಶಾಲೆಗಳ ಅಭಿವೃದ್ಧಿ ಬಗ್ಗೆ ತಲೆ ಕೆಡಿಸಿಕೊಳ್ಳಬೇಕು ಹೇಳಿದರು.

ಈ ಪತ್ರಿಕಾಗೋಷ್ಠಿಯಲ್ಲಿ ಶಿವ ಶಂಕರಗೌಡಾ ಕಡೂರು, ಇಮಾಮ್ ಸಾಬ ಗರಡಿಮನಿ, ಹನಮೇಶ ಗುಮಗೇರಿ, ಯಲ್ಲಪ್ಪ ಬಾಗಲಿ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

ವರದಿಗಾರರು ಶರಣಪ್ಪ ಲೈನದ್ ಕುಷ್ಟಗಿ

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!