December 23, 2024

ಸಿಪಿಐ(ಎಂಎಲ್)ರೆಡ್ ಸ್ಟಾರ್‌  ಕರ್ನಾಟಕ ರೈತ ಸಂಘ-ಎಐಕೆಕೆಎಸ್ ಜಂಟಿ ತಾಲೂಕು ಸಮಿತಿಗಳು-ಸಿಂಧನೂರ ಮಾನ್ಯ ಸಹಾಯಕ ಆಯುಕ್ತರು ಲಿಂಗಸೂಗೂರು.& ಮಾನ್ಯ ತಹಶೀಲ್ದಾರರು ಮನವಿ

 

ಸಿಂಧನೂರು .ಕರ್ನಾಟಕ ಸರಕಾರ ಸರ್ವೆ ನಂ. 419 ಹಾಗೂ ಸುಲ್ತಾನಪೂರ ಕರ್ನಾಟಕ ಸರಕಾರ ಭೂಮಿ ಸರ್ವೆ ನಂ. 186ರಲ್ಲಿ ನ್ಯಾಯಾಲಯದ ಸ್ಟೇಟಸ್ಕೋ(ಯಥಾಸ್ಥಿತಿ) ಸರಕಾರದ ಭೂಮಿ ಪರವಾಗಿರುವ ಆದೇಶವನ್ನು ಉಲ್ಲಂಘಿಸಿ, ನಾಡಗೌಡರು ಪುನಃ ಕಾನೂನು ಬಾಹೀರ ಸಾಗುವಳಿಯನ್ನು ತಡೆಯುವ

ಸಿಪಿಐ(ಎಂಎಲ್)ರೆಡ್ ಸ್ಟಾರ್‌ ಹಾಗೂ ಕರ್ನಾಟಕ ರೈತ ಸಂಘ-ಎಐಕೆಕೆಎಸ್ ಜಂಟಿ ತಾಲೂಕು ಸಮಿತಿಗಳು ಸಿಂಧನೂರು ತಮ್ಮಲ್ಲಿ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿ ಒತ್ತಾಯಿಸಿ ಆಗ್ರಹಿಸುವುದೇನಂದರೆ, ಸಿಂಧನೂರು ಕಂದಾಯ ಗ್ರಾಮದ ಸರಕಾರಿ ಸರ್ವೆ ನಂ. 419 ಹಾಗೂ ಸುಲ್ತಾನಪೂರ ಕಂದಾಯ ಗ್ರಾಮದ ಸರಕಾರಿ ಸರ್ವೆ ನಂ. 186 ಕರ್ನಾಟಕ ಸರಕಾರಿ ಭೂಮಿಗೆ ಮಾನ್ಯ ಕಲಬುರ್ಗಿ ಉಚ್ಛ ನ್ಯಾಯಾಲಯವು 2023 ರಲ್ಲಿ ಕರ್ನಾಟಕ ಸರಕಾರದ ಭೂಮಿಯನ್ನು ಸ್ಟೇಟಸ್ಕೋ(ಯಥಾಸ್ಥಿತಿ)ಇರುವಂತೆ ಕಾಯ್ದುಕೊಳ್ಳಲು ಸ್ಪಷ್ಟವಾಗಿ ಆದೇಶವನ್ನು ನೀಡಿದೆ. ಆದರೆ ಪುನಃ ಜವಳಗೇರಾ ನಾಡಗೌಡರ ಕುಟುಂಬ ಸದರಿ ಭೂಮಿಯನ್ನು ನ್ಯಾಯಾಲಯ ಸ್ಟೇಟಸ್ಕೋ ಆದೇಶವನ್ನು ಹಾಡುಹಗಲೇ ಉಲ್ಲಂಘನೆ ಮಾಡಿ ಸಾಗುವಳಿ ಮಾಡುತ್ತಿದ್ದಾರೆ. ಸಂಬಂಧಿಸಿದ ಸಿಂಧನೂರು ತಹಶಿಲ್ದಾರರು ಮತ್ತು ದಂಡಾಧಿಕಾರಿಗಳು ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿ ಸಾಗುವಳಿ ಮಾಡುತ್ತಿರುವ ನಾಡಗೌಡರ ಕುಟುಂಬದ ಮೇಲೆ ಪ್ರಕರಣ ದಾಖಲಿಸಿ, ಸಾಗುವಳಿ ಮಾಡುತ್ತಿರುವುದನ್ನು ತಡೆದು ನ್ಯಾಯಾಲಯದ ಆದೇಶದಂತೆ ಕರ್ನಾಟಕ ಸರಕಾರ ಭೂಮಿಗೆ ಸ್ಟೇಟಸ್ಕೋ ಪಾಲನೆ ಮಾಡಬೇಕೆಂದು ನಮ್ಮ ಆಗ್ರಹವಾಗಿದೆ.

 

ನಾವು ಭೂಹೀನ ದಲಿತ ಬಡವರು ಸುಮಾರು 6 ತಿಂಗಳುಗಳ ಕಾಲ ಅನಿರ್ದಿಷ್ಟ ಧರಣಿ ಹೋರಾಟದ ಮೂಲಕ ಸಾಗುವಳಿ ಮಾಡುತ್ತಿರುವವರನ್ನು ಪೋಲಿಸ್ ಬಲಪ್ರಯೋಗದಿಂದ ಹೊರಹಾಕಿ ಕರ್ನಾಟಕ ಸರಕಾರ ಭೂಮಿಗೆ ನ್ಯಾಯಾಲಯದ ಸ್ಟೇಟಸ್ಕೊ ಆದೇಶವನ್ನು ಉಲ್ಲಂಘನೆ ಮಾಡಿ ಸಾಗುವಳಿ ಮಾಡುತ್ತಿದ್ದರೂ ಪರೋಕ್ಷವಾಗಿ ನಾಡಗೌಡರ ಬೆನ್ನಿಗೆ ತಾಲೂಕು ಆಡಳಿತ ನಿಂತಿರುವುದು ಕಾನೂನು ಬಾಹೀರ ಕಾರ್ಯವಾಗಿದೆ. ನಾಡಗೌಡರ ಸರಕಾರಿ ಭೂಮಿ ಅಕ್ರಮ ಸಾಗುವಳಿ ನಿಲ್ಲಿಸದೇ ಹೋದರೆ ಅರ್ಜಿ ಸಲ್ಲಿಸಿದ ಭೂಹೀನ ದಲಿತ ಬಡವರು ಪುನಃ ಸಾಗುವಳಿಗೆ ನಾವು ಮುಂದಾಗಬೇಕಾಗುತ್ತದೆಂದು ಈ ಮೂಲಕ ತಮ್ಮಲ್ಲಿ ಒತ್ತಾಯಿಸುತ್ತಿದ್ದೇವೆ ಹೆಚ್.ಆರ್.ಹೊಸಮನಿ ತಾಲೂಕು ಸಮಿತಿ ಸದಸ್ಯರು ಸಿಪಿಐ(ಎಂಎಲ್)ರೆಡ್ ಸ್ಟಾರ್‌ ಸಿಂಧನೂರು  ಮುದಿಯಪ್ಪ ಹನುಮನಗರ ಕ್ಯಾಂಪ್  ಸಮಿತಿ ಸದಸ್ಯರು ಸಿಪಿಐ(ಎಂಎಲ್)ರೆಡ್ ಸ್ಟಾರ್‌ ಸಿಂಧನೂರುರ ಪಶುರಾಮ ತಾಲೂಕು ಸಮಿತಿ ಸದಸ್ಯರು ಕರ್ನಾಟಕ ರೈತ ಸಂಘ ಇಂದು ಸಾಯಂಕಾಲ 4 ಗಂಟೆಗೆ ಮಾನ್ಯ ಲಿಂಗಸೂಗೂರು ಸಹಾಯಕ ಆಯುಕ್ತರಾದ, ಅವಿನಾಶ ಶಿಂಧೆ ಅವರಿಗೆ ಎಂ.ಗಂಗಾಧರ ಮಾತನಾಡಿ ಮನವಿ ಪತ್ರ ನೀಡಿ ಆಗ್ರಹಿಸಲಾಯಿತು. ನಮಗೆ ಸಮಯ ಕೊಡಿ ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ಸಹಾಯಕ ಆಯುಕ್ತರು ಹೇಳಿದರು.

ಈ ಸಂದರ್ಭದಲ್ಲಿ ಭೂಹೀನ ಕೃಷಿ ಕೂಲಿಕಾರರು ಹಾಗೂ ಕಮ್ಯುನಿಸ್ಟ್ ಪಕ್ಷದ ಮತ್ತು ಕರ್ನಾಟಕ ರೈತ ಸಂಘದ ಕಾರ್ಯಕರ್ತರು ಇದ್ದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!