December 23, 2024

ವಿದ್ಯುತ್ ತಂತಿ ತಗುಲಿ ರೈತ ಮತ್ತು ಎತ್ತು ಸಾವು.

 

ಕುಷ್ಟಗಿ :

 

ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ರೈತ ಸೇರಿದಂತೆ ಒಂದು ಎತ್ತು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕುಷ್ಟಗಿ ತಾಲೂಕಿನ ಚಿಕ್ಕ ತೆಮ್ಮಿನಾಳ ಸೀಮಾದ ಜಮೀನೊಂದರಲ್ಲಿ ಭಾನುವಾರ ಬೆಳಿಗ್ಗೆ ಕೃಷಿ ಕೆಲಸದಲ್ಲಿ ತೋಡಗಿದಾಗ ಈ ಘಟನೆ ಸಂಭವಿಸಿದೆ

 

ಚಿಕ್ಕ ತೆಮ್ಮಿನಾಳ ಗ್ರಾಮದ ರೈತ ಬಸಪ್ಪ ತಂದಿ ಯಂಕಪ್ಪ ಸಲಗಾರ (45) ಸಾವಿಗೀಡಾದ ದುರ್ದೈವಿ ಎಂದು ಗುರುತಿಸಲಾಗಿದೆ .ಘಟನಾ ಸ್ಥಳಕ್ಕೆ ಕಂದಾಯ ಇಲಾಖೆ ಹಾಗೂ ಪೊಲೀಸ್‌ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸಾಂತ್ವಾನ : ವಿದ್ಯುತ್ ತಗಲಿ ಮೃತ ಪಟ್ಟ ರೈತ ಬಸಪ್ಪ ಸಲಗಾರ

ಮೃತ ಪಟ್ಟ ಸುದ್ದಿ ತಿಳಿದು ವಿರೋದ ಪಕ್ಷದ ಮುಖ್ಯ ಸಚೇತಕ ಹಾಗೂ ಕುಷ್ಟಗಿ ಕ್ಷೇತ್ರದ ಶಾಸಕ ದೊಡ್ಡನಗೌಡ ಪಾಟೀಲ್ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿ ಸರಕಾರದಿಂದ ಪರಿಹಾರ ಕೋಡಿಸುವುದಾಗಿ ಹೇಳಿದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!