December 23, 2024

ಮೋದಿ ಯುಗ ಅಂತ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ  ನವರ ಅಭಿವೃದ್ಧಿಯೇ ಕಾಂಗ್ರೇಸ್ ಗೆಲುವಿಗೆ ಶ್ರೀರಕ್ಷೆ.

 

 

ಯಲಬುರ್ಗಾ :

ಜಾತಿ ಮತ್ತು ಧರ್ಮದ ಆಧಾರದ

ಮೇಲೆ ರಾಜಕಾರಣ ಮಾಡಿದರೆ ನಡೆಯುವದಿಲ್ಲ ಇದಕ್ಕೆ ಉದಾಹರಣೆ ಅಯ್ಯೋದ್ಯದಲ್ಲಿ ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದಿದೆ ಹನುಮ ಜನಿಸಿದ ಅಂಜನಾದ್ರಿ ನಾಡಿನಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬಂದಿದೆ ಎಂದು ಮುಖ್ಯ ಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.

 

ಪಟ್ಟಣದ ಬುದ್ಧ ಬಸವ ಅಂಬೇಡ್ಕರ ಭವನದಲ್ಲಿ ಕಾರ್ಯಕರ್ತರ ಅಭಿನಂದನಾ ಸಭೆ ಉದ್ದೇಶಿಸಿ ಮಾತನಾಡಿದ ಅವರು ,

ಬಿಜೆಪಿ ಪಕ್ಷದವರು ಜಾತಿ ಧರ್ಮದ ಆಧಾರದಲ್ಲಿ ರಾಜಕಾರಣ ಮಾಡಲು ಹೋರಟಿದ್ದರು ಆದರೆ ಇನ್ನೂ ಮೋದಿ ಯುಗ ಮುಗಿಯಿತು ಇನ್ನೇನಿದ್ದರು ಅಭಿವೃದ್ಧಿಯ ಪರ್ವ ಆರಂಭವಾಗಿದೆ ಅಟಲ್ ಬಿಹಾರ ವಾಜಪೇಯಿ,ಎಲ್ ಕೆ ಅಡ್ವಾನಿ ಯವರ ಬಿಜೆಪಿಯೇ ಬೇರೇ ನರೇಂದ್ರಮೋದಿ ಬಿಜೆಪಿಯೇ ಬೇರೇ ಅಟಲ್ ಬಿಹಾರಿ ವಾಜಪೇಯಿ ಒಂದು ದಿನನು ವಿರೋಧ ಪಕ್ಷದ ನಾಯಕರಬಗ್ಗೆ ಟೀಕೆ ಮಾಡಲಿಲ್ಲ ಅವರ ಸಿದ್ಧಾಂಥವೆ ಬೇರೆ ಇವರ ತತ್ವ ಸಿದ್ಧಾಂತವೆ ಬೇರೆ ನರೇಂದ್ರ ಮೋದಿ ಸರಕಾರ ಬಹುಕಾಲ ಅಧಿಕಾರದಲ್ಲಿ ಇರುವದಿಲ್ಲ ಸರಕಾರ ಯಾವಗಾದರು ಪತನವಾಗ ಬಹುದು ಎಂದು ಹೇಳಿದರು.

 

 

ಕ್ಷೇತ್ರದ ಅಭಿವೃದ್ಧಿಗೆ ನಮ್ಮ ರಾಜ್ಯ ಸರಕಾರದ ಸಾಧನೆ ಮತ್ತು ಸಿದ್ದರಾಮಯ್ಯ ನವರ ಜನಪರ ಕಾಳಜೀಯೇ ನಮ್ಮ ಪಕ್ಷದ ಗೆಲೂವಿಗೆ ಕಾರಣವಾಗಿದೆ ಅಭಿವೃದ್ದಿ ಮಾನದಂಡದಿಂದ ಜನ ಮತನೀಡಿ ಆರಿಸಿ ಕಳಿಸಿದ್ದಾರೆ ಇದಕ್ಕೆ ಕಲ್ಯಾಣ ಕರ್ನಾಟಕದ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸಿರುವುದು ಸಂತಸ ತಂದಿದೆ. ಇದಕ್ಕೆ ಕಾರಣರಾದ ಮತದಾರರಿಗೆ ಧನ್ಯವಾದ ತಿಳಿಸುವೆ’ ನೂತನವಾಗಿ ಆಯ್ಕೆ ಯಾಗಿರುವ ಸಂಸದ ರಾಜಶೇಖರ ಹಿಟ್ನಾಳ ರವರ ಮುಂದೆ ಅನೇಕ ಸವಾಲುಗಳಿವೆ ರಾಷ್ಠ್ರೀಯ ಹೆದ್ದಾರಿ , ಮತ್ತು ಗದಗ ವಾಡಿ ರೈಲ್ವೆ ಕಾಮಗಾರಿಯನ್ನ ಮೂರು ನಾಲ್ಕು ವರ್ಷದೊಳಗೆ ಪೂರ್ಣ ಗೊಳಿಸ ಬೇಕು ಮತ್ತು ಗಿಣಗೇರ ಮೇಹಬೂಬ ನಗರ ರೈಲ್ವೆ ಕಾಮಗಾರಿ ಆದಷ್ಟು ಬೇಗನೆ ಪೂರ್ಣ ಗೊಳಿಸಿ ಅಭಿವೃದ್ಧಿಗೆ ಆದ್ಯತೆ ನೀಡಿ ಎಂದು ಸಲಹೆ ನೀಡಿದರು.

 

 

ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ ,

ಅಧಿಕಾರ ಶಾಸ್ವತವಲ್ಲ ಮೊನ್ನೆ ನಾನು ಹಾಲಿ ಸಂಸದ

ಇಂದು ನಾನು ಮಾಜಿ ಸಂಸದನಾಗಿರುವೆ ಅಧಿಕಾರ ಮುಖ್ಯವಲ್ಲ ಅಧಿಕಾರ ಬರುತ್ತೆ ಹೋಗುತ್ತೆ ಆದರೆ ನಮ್ಮ ಅವದಿಯಲ್ಲಿ ಕ್ಷೇತ್ರಕ್ಕೆ ಏನು ಅಭಿವೃದ್ಧಿ ಕೆಲಸ ಮಾಡಿರುವೆ ಎನ್ನುವದನ್ನ ಆತ್ಮಾವಲೋಕನ ಮಾಡಿಕೊಳ್ಳ ಬೇಕು. ಕೊಪ್ಪಳದಲ್ಲಿ ಭೂ ಸ್ವಾಧಿನ ಮಾಡಿಕೊಂಡು ವಿಮಾನ ನಿಲ್ದಾಣ ಕಾಮಗಾರಿ ಪ್ರಾರಂಭಿಸ ಬೇಕು

ಅಂಜನಾದ್ರಿಯು ಪ್ರವಾಸಿ ತಾಣ ವಾಗಿರುವದರಿಂದ ಅಯೋದ್ಯದಿಂದ ಅಂಜನಾದ್ರಿಯ ವರಗೆ ರೈಲ್ವೆ ಪ್ರಾರಂಭಿಸ ಬೇಕು ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಜನ ಸಂಖ್ಯೆ ಹೊಂದಿರುವ ನಗರ ಗಂಗಾವತಿ ಗಂಗಾವತಿ ರಿಂಗ್ ರೋಡ್ ಅತ್ಯವಶ್ಯವಾಗಿದೆ ಕೆ,ರಾಜ ಶೇಖರ ಹಿಟ್ನಾಳ ರವರ ಗೆಲೂವಿಗೆ ಅತಿ ಹೆಚ್ಚು ಬಹುಮತ ನೀಡಿದ ಕ್ಷೇತ್ರ ಶಿರಗುಪ್ಪ ಮತ್ತು ಗಂಗಾವತಿ ಈ ಕ್ಷೇತ್ರಗಳಿಗೆ ಹೆಚ್ಚಿನ ಆಧ್ಯೆತೆ ನೀಡ ಬೇಕು ಅನೇಕ ಕಡೆ ರೈಲ್ವೆ ಮೇಲಸೇತುವೆ ನಿರ್ಮಾಣ ಮಾಡ ಬೇಕಾಗಿದೆ. ಮತ್ತು ದರೋಜಿ,ಗಞಗಾವತಿ ಗಿಣಗೇರ,ಬಾಗಲಕೊಟಿ ಮಾರ್ಗವಾಗಿ ನೂತನ ರೈಲ್ವೆ ಮಾರ್ಗ ಸರ್ವೆ ಯಾಗಿದೆ ಕಾಮಗಾರಿಗೆ ಪ್ರಾರಂಭಿಸಿ ಜಿಲ್ಲೆಯ ಜನತೆಗೆ ಅನಕೂಲ ಮಾಡಿಕೊಡ ಬೇಕು ಎಂದು ನೂತನ ಸಂಸದ ರಾಜಶೇಖರ ಹಿಟ್ನಾಳಗೆ ಕಿವಿ ಮಾತು ಹೇಳಿದರು.

 

ಕ್ಷೇತ್ರದ ಪ್ರತಿಯೋಬ್ಬ ಶಾಸಕರ ಸಲಹೆ ಪಡೆದು ಮತ್ತು ಮತದಾರರರ ಆಶೋತ್ತರಗಳಿಗೆ ಸ್ಪಂದಿಸಿ ಕ್ಷೇತ್ರದ ಮೂಲ ಭೂತ ಸಿಕರ್ಯಕ್ಕೆ ಪ್ರಾಮಾಣಿಕ ಸೇವೆ ಸಲ್ಲಿಸುವದಾಗಿ ನೂತನ ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.

 

ಜಿಲ್ಲಾ ಉಸ್ತವಾರಿ ಸಚಿವ ಶಿವರಾಜ ತಂಗಡಗಿ .ಕಾಂಗ್ರೇಸ್ ಅಧ್ಯಕ್ಷ ಅಮರೇಗೌಡ ಬಯ್ಯಾಪೂರ ,ಬಸವರಾಜ ಉಳ್ಳಾಗಡ್ಡಿ ಯಂಕಣ್ಣ ಯರಾಶಿ, ಜಿಲ್ಲಾ ಕಾರ್ಯದರ್ಶಿ ಕೃಷ್ಣ ಇಟ್ಟಂಗಿ,ಬಿ,ಎಂ,ಶಿರೂರು,ಕೆರೆ ಬಸಪ್ಪ ನಿಡಗುಂದಿ ,ಕೆ,ಪಿ,ಸಿ,ಸೀ,ಸದಸ್ಯ ಗೀರೀಜಾ ರೇವಣೇಪ್ಪ ಸಂಗಟಿ, ಜೋತಿ ಗೊಂಡಬಾಳ ,ವೀರನಗೌಡ ಬಳೋಟಗಿ, ಎ,ಜಿ,ಭಾವಿಮನಿ ,ಮಹೇಶ ಹಳ್ಳಿ.ಅಶೋಕ ತೋಟದ,ಪಕ್ಷದ ವಕ್ತಾರ ಡಾ,ಶಿವನಗೌಡ ದಾನರಡ್ಡಿ,ಅಖ್ತರಸಾಬ ಖಾಜಿ. ಮಲ್ಲಮ್ಮ ಗೊಂದಿ, ಮಾಹಂತೇಶ ಗಾಣಿಗೇರ, ಸೇರಿದಂತೆ ಮತ್ತೀತರರು ಉಪಸ್ಥಿತರಿದ್ದರು

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!