December 23, 2024

ಪಡಿತರ ಅಕ್ಕಿ ಅಕ್ರಮ ಸಾಗಾಟ;ಲಾರಿ ವಶಕ್ಕೆ.

ಪಡಿತರ ಅಕ್ಕಿ ಅಕ್ರಮ ಸಾಗಾಟ ಮಾಡುತ್ತಿದ್ದ ಲಾರಿ ವಶಕ್ಕೆ ಕುಕನೂರು ಪೋಲಿಸ್ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ

ಕುಕನೂರು:

ತಾಲೂಕಿನ ತಳಕಲ್ಲ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಯಲ್ಲಿ ಪಡಿತರ ಅಕ್ಕಿ ಕಳ್ಳ ಸಾಗಾಟ ಮಾಡುತ್ತಿದ್ದವರನ್ನು ಯಲಬುರ್ಗಾ ಆಹಾರ ನಿರೀಕ್ಷಕರು ಹಾಗೂ ಕುಕನೂರು ಠಾಣೆ ಪೊಲೀಸರು ಭಾನುವಾರ ಬಂಧಿಸಿ ಲಾರಿ, ಅಕ್ರಮ ಪಡಿತರ ಅಕ್ಕಿ ಜಪ್ತಿ ಮಾಡಿದ್ದಾರೆ.

ಗದಗದಿಂದ ಸಿಂಧನೂರಿಗೆ ಅಕ್ರಮವಾಗಿ 250 ಕ್ವಿಂಟಲ್‌ ಪಡಿತರ ಅಕ್ಕಿಯನ್ನು ಕಳ್ಳ ಸಾಗಾಟ ಮಾಡಲಾ ಗುತ್ತಿತ್ತು. ಖಚಿತ ಮಾಹಿತಿ ಮೇಲೆ ಭಾನುವಾರ ತಾಲೂ ಕಿನ ತಳಕಲ್ಲ ಗ್ರಾಮದ ಬಳಿ ಯಲಬುರ್ಗಾ ಆಹಾರ ನಿರೀಕ್ಷಕ ದತ್ತಪ್ಪಯ್ಯ, ಪಿಎಸ್‌ಐ ಟಿ. ಗುರುರಾಜ್ ಹಾಗೂ ಪೊಲೀಸ್‌ ಸಿಬ್ಬಂದಿ ಬಂಧಿಸುವಲ್ಲಿ ಯಶಸ್ವಿಯಾ ಗಿದ್ದಾರೆ. ₹5.50 ಲಕ್ಷ ಬೆಲೆಯ 50 ಕೆಜಿಯ ಸುಮಾರು 500 ಚೀಲಗಳನ್ನು ಲೋಡಿಂಗ್ ಮಾಡಿಕೊಂಡು ಸಾಗಾಟ ಮಾಡುತ್ತಿದ್ದ ಅಶೋಕ ಲೈಲ್ಯಾಂಡ್ ಲಾರಿಯನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.

ಇದರಲ್ಲಿ ಭಾಗಿಯಾದ ಗಂಗಾವತಿಯವರಾದ ಸಿದ್ದಣ್ಣ ಮಸ್ಕಿ, ಇಲಕಲ್‌ ಗೋಪಾಲ, ಸಿಂಧನೂರಿನ ಗುರು ಪೊತನಾಳ, ಅನಿಲ ಪಟ್ಟಣ ಶೆಟ್ಟಿ, ಶ್ರೀಧರ, ಖಾಜಾಹುಸೇನ್‌, ಪೂತನಾಳ ಗ್ರಾಮದ ಶ್ರೀ ವಾಸವಿ ಎಂಟರ್‌ಪ್ರೈಸಸ್‌ನ ಮಾಲೀಕ ಹಾಗೂ ಲಾರಿ ಚಾಲಕ ಶಕೀರ್‌ಅಹ್ಮದ್ ಮೇಲೆ ಕುಕನೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!