December 22, 2024

ಒಳ ಹರಿವು ಹೆಚ್ಚಳ ;ಅಣೆಕಟ್ಟೆ ಭರ್ತಿಗೆ ಇನ್ನು ಒಂಭತ್ತು ಅಡಿ ಬಾಕಿ

ಕೊಪ್ಪಳ:

ಜಿಲ್ಲೆಯ ಮಲ್ಲಾಪೂರ ಬಳಿಯಿರುವ
ತುಂಗಭದ್ರಾ ಜಲಾಶಯದ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು ಈಗಿನ ಒಳ ಹರಿವಿನ ಪ್ರಮಾಣವು1.12 ಲಕ್ಷ ಕ್ಯುಸೆಕ್‌ನಷ್ಟಿದ್ದು
ತುಂಗಭದ್ರಾ ಅಣೆಕಟ್ಟೆ ಭರ್ತಿಯಾಗಲು ಇನ್ನು ಒಂಭತ್ತು ಅಡಿಯಷ್ಟೇ ಬಾಕಿ ಇದೆ.

ಮಲೆನಾಡಿನ ಭಾಗಗಳಲ್ಲಿ ನಿರಂತರ ಮಳೆ ಅಬ್ಬರಿಸುತ್ತಿದ್ದು ದಿನೆ ದಿನೇ ಮಳೆಯ ಅಬ್ಬರ ಹೆಚ್ಚಾಗುತ್ತಿದ್ದು ತುಂಗಾ ಭದ್ರಾ ನದಿಗಳು ಮೈದುಂಬಿ ಹರಿಯುತ್ತಿದ್ದು ಜಲಾಶಯಗಳು ಭರ್ತಿಯಾಗಿ ನದಿಗಳಿಗೆ ನೀರನ್ನು ಬಿಡಲಾಗಿದೆ.ಹಾಗೂ ತುಂಗಭದ್ರಾ ಜಲಾಶಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ ವಾರದಿಂದ ಉತ್ತಮ ಮಳೆಯಾಗಿದ್ದು ಜಲಾಶಯದ ಒಳಹರಿವು ಹೆಚ್ಚಳವಾಗಲು ಕಾರಣವಾಗಿದೆ.ಜಲಾಶಯವು

1,633 ಅಡಿ ಎತ್ತರವಿದ್ದು ಸದ್ಯ 1,624.41 ಅಡಿ ಮಟ್ಟಕ್ಕೆ ನೀರು ತಲುಪಿದೆ. 105.78 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 74.58 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಇದೇ ಪ್ರಮಾಣದಲ್ಲಿ ನೀರು ಹರಿದುಬಂದರೆ ನಾಲೈದು ದಿನಗಳಲ್ಲಿ ಜಲಾಶಯ ಭರ್ತಿಯಾಗುವ ಸಾಧ್ಯತೆ ಇದ್ದು, ಹೀಗಾಗಿ ಭಾನುವಾರವೇ ಬೆಳಿಗ್ಗೆ 9 ಗಂಟೆಗೆ ನದಿಗೆ 4 ಸಾವಿರ ಕ್ಯುಸೆಕ್‌ನಿಂದ 6 ಸಾವಿರ ಕ್ಯುಸೆಕ್‌ನಷ್ಟು ನೀರು ಹರಿಸಲಾಗಿದೆ. ನದಿ ಪಾತ್ರದ ಜನರು ಎಚ್ಚರದಿಂದ ಇರಬೇಕು’ ಎಂದು ತುಂಗಭದ್ರಾ ಮಂಡಳಿ ಬೆಳಿಗ್ಗೆ 8.30ಕ್ಕೆ ಪ್ರಕಟಣೆ ಹೊರಡಿಸಿತ್ತು. ಆದರೆ ನಿಗದಿಯಂತೆ 9 ಗಂಟೆಗೆ ನದಿಗೆ ನೀರು ಹರಿಸಿಲ್ಲ. ಬಹುತೇಕ ಸಂಜೆಯ ವೇಳೆಗೆ ಅಥವಾ ಸೋಮವಾರ ನದಿಗೆ ನೀರು ಹರಿಯಬಿಡುವ ಸಾಧ್ಯತೆ ಇದೆ ಎಂದು ಮಂಡಳಿಯ ಮೂಲಗಳು ತಿಳಿಸಿವೆ.

ಕಳೆದ ವರ್ಷ ಮುಂಗಾರು ಮಳೆ ಅಭಾವ ತೀವ್ರವಾಗಿ ಜಲಾಶಯ ಬತ್ತಿ ಜಲಾಶಯದ ಒಡಲು ಕಾಣುತ್ತಿತ್ತು.
ಈ ವರ್ಷವು ಮುಂಗಾರಿನಲ್ಲಿ ಒಂದು ತಿಂಗಳು ವಿಳಂಬವಾಗಿ ಆರಂಭವಾದ ಮಳೆ ಬಳಿಕವೂ ಅಂತಹ ಬಿರುಸು ಪಡೆದುಕೊಳ್ಳಲೇ ಇಲ್ಲ.
ಹೀಗಾಗಿ ಕಳೆದ ವರ್ಷ ಇದೇ ಸಮಯದಲ್ಲಿ ತುಂಗಭದ್ರಾ ಜಲಾಶಯದಲ್ಲಿ 13.71 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು. ಒಟ್ಟಾರೆ ಮಳೆಗಾಲದ ಕೊನೆಯಲ್ಲಿ ಜಲಾಶಯ ಪೂರ್ಣ ಪ್ರಮಾಣದಲ್ಲಿ ತುಂಬದೆ 89 ಟಿಎಂಸಿ ಅಡಿಯಷ್ಟೇ ತುಂಬಿತ್ತು. 2022ರಲ್ಲಿ ಈ ವರ್ಷದಂತೆ ಭರ್ಜರಿ ಮಳೆಯಾಗಿತ್ತು ಹಾಗೂ ಸುಮಾರು ಒಂದೂವರೆ ತಿಂಗಳ ಕಾಲ ಕ್ರಸ್ಟ್‌ಗೇಟ್‌ಗಳನ್ನು ತೆರೆದು ಜಲಾಶಯದಿಂದ ನದಿಗೆ ನೀರು ಹರಿಸಲಾಗಿತ್ತು. ಆ ವರ್ಷ ಸುಮಾರು 400 ಟಿಎಂಸಿ ಅಡಿಯಷ್ಟು ನೀರು ನದಿಗೆ ಹರಿದಿತ್ತು. ಎಂದು ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ಪ್ರಕಟಣೆಗೆ ತಿಳಿಸಿದೆ.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!