December 22, 2024

ಲಿಂಗನಬಂಡಿ ರೈಲು ನಿಲ್ದಾಣಕ್ಕೆ ಶ್ರೀ ಜಗದ್ಗುರು ಮೌನೇಶ್ವರರ ಹೆಸರಿಡಿ;ಕಮ್ಮಾರ

ಯಲಬುರ್ಗಾ.

ಲಿಂಗನಬಂಡಿ ರೈಲು ನಿಲ್ದಾಣಕ್ಕೆ ಶ್ರೀ ಜಗದ್ಗುರು ಮೌನೇಶ್ವರ ರೈಲು ನಿಲ್ದಾಣ ಎಂದು ನಾಮಕರಣ ಮಾಡುವಂತೆ ಹಾಗೂ ಲಿಂಗನಬಂಡಿ ಗ್ರಾಮದಲ್ಲಿನ ಶ್ರೀ ಜಗದ್ಗುರು ಮೌನೇಶ್ವರ ದೇವಸ್ಥಾನದಲ್ಲಿ ಪೂಜಾರಿ ವಿಧಾನಗಳನ್ನು ನೆರವೇರಿಸಲು ಅನುಮತಿ ನೀಡುವಂತೆ ಯಲಬುರ್ಗಾ ತಾಲೂಕು ವಿಶ್ವಕರ್ಮ ಸಮಾಜದ ವತಿಯಿಂದ ತಹಸೀಲ್ದಾರರಿಗೆ ಮನವಿಯನ್ನು ಸಲ್ಲಿಸಲಾಯಿತು.

ನಂತರ ಪತ್ರಿಕೆಯೊಂದಿಗೆ ಯಲಬುರ್ಗಾ ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷರಾದ ಚಂದ್ರಶೇಖರ್ ಕಮ್ಮಾರ ಮಾತನಾಡಿ ಲಿಂಗನಬಂಡಿ ಗ್ರಾಮದಲ್ಲಿ ಜಗದ್ಗುರು ಶ್ರೀ ಮೌನೇಶ್ವರರ ಮಂದಿರ ನಿರ್ಮಾಣವಾಗಿದ್ದು ಮಂದಿರದಲ್ಲಿ ಈವರಿಗಾದರೂ ಕೂಡ ಪೂಜಾ ವಿಧಿ ವಿಧಾನಗಳು ಆರಂಭಗೊಂಡಿಲ್ಲ ಆದ ಕಾರಣ ದೇವಸ್ಥಾನದಲ್ಲಿ ಹಿಂದೂ ಧರ್ಮದ ಪ್ರಕಾರ ಗಳನ್ನು ನೆರವೇರಿಸಲು ತಾಲೂಕು ಆಡಳಿತವು ಅನುಮತಿ ನೀಡಬೇಕು ಹಾಗೂ ನಿಂಗನ ಬಂಡಿ ಗ್ರಾಮದಲ್ಲಿನ ರೈಲು ನಿಲ್ದಾಣಕ್ಕೆ ಶ್ರೀ ಜಗದ್ಗುರು ಮೌನೇಶ್ವರ ರೈಲು ನಿಲ್ದಾಣ ಎಂದು ನಾಮಕರಣ ಮಾಡಬೇಕು ಎಂದು ಆಗ್ರಹಿಸಿದರು.

ಈ ವೇಳೆ ಶರಣಪ್ಪ ಬಡಿಗೇರ್, ಗಾಳೆಪ್ಪ ಬಡಿಗೇರ್, ಗುರುಮೂರ್ತಿ ಬಡಿಗೇರ್, ಶಂಕ್ರಪ್ಪ ಬಡಿಗೇರ್, ಚಂದ್ರಪ್ಪ ಬಡಿಗೇರ್, ಶಿವಾನಂದ ಬಡಿಗೇರ್ ಹಾಗೂ ತಾಲೂಕು ಸಮಿತಿಯ ಸದಸ್ಯರು ಸಮಾಜದ ಮುಖಂಡರು ಹಾಜರಿದ್ದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!